ಕೇರಳದಲ್ಲಿರುವ ಅನಂತಪದ್ಮನಾಭ ಕ್ಷೇತ್ರವನ್ನು ಕಂಡು ಕೇಳರಿಯದವರು ಯಾರು ಇಲ್ಲ ಅನಂತಪದ್ಮನಾಭ ದೇವಾಲಯ ದಕ್ಷಿಣ ಕೆರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕುಂಬಳೆಯಿಂದ ಸುಮಾರು ಆರರಿಂದ ಏಳು ಕಿಲೋಮೀಟರ್ ದೂರದಲ್ಲಿದೆ ಈ ದೇವಸ್ಥಾನದ ವಿಶಿಷ್ಟತೆ ಎಂದರೆ ಈ ದೇವಾಲಯ ಇರುವುದು ಸರೋವರದ ಮಧ್ಯದಲ್ಲಿ ಇದು ಕೇರಳದಲ್ಲಿರುವ ಏಕೈಕ ಸರೋವರದ ದೇವಸ್ಥಾನವಾಗಿದೆ ಪುರಾಣಗಳ ಪ್ರಕಾರ ಈ ದೇವಾಲಯ ತಿರುವನಂತಪುರ ಪದ್ಮನಾಭ ದೇವಾಲಯದ ಮೂಲಸ್ಥಾನ ಎಂದು ಉಲ್ಲೇಖಿಸಲಾಗಿದೆ
ಈ ದೇವಾಲಯವು 32 ಅಡಿ ಸರೋವರದ ಮಧ್ಯೆ ನಿರ್ಮಿಸಲಾಗಿದೆ ಈ ದೇವಾಲಯದ ಪ್ರಧಾನ ದೇವರು ವಿಷ್ಣು ಆತನನ್ನು ಇಲ್ಲಿ ಅನಂತಪದ್ಮನಾಭ ಎಂಬ ಹೆಸರಿನಿಂದ ಕರೆಯಲಾಗುತ್ತದೆ ಈ ದೇವಾಲಯದ ಸರೋವರದಲ್ಲಿ ಅತ್ಯಂತ ವಿಶಿಷ್ಟವಾದಂತಹ ದೈವಾಂಶ ಸಂಭೂತವಿರುವ ಒಂದು ಮೊಸಳೆಯು ವಾಸವಾಗಿತ್ತು ಈ ಮೊಸಳೆ ಉಳಿದ ಮೊಸಳೆಗಳಿಗಿಂತ ಭಿನ್ನ ಈ ಮೊಸಳೆ ಸಂಪೂರ್ಣವಾಗಿ ಸಸ್ಯಾಹಾರಿಯಾಗಿದೆ ಅನಂತಪುರ ದೇವಸ್ಥಾನದ ರಕ್ಷಕ ಎಂದೇ ಮೊಸಳೆಯನ್ನು ಕರೆಯಲಾಗುತ್ತಿದೆ
ಈ ಕ್ಷೇತ್ರದ ಇತಿಹಾಸದ ಪ್ರಕಾರ ಈ ಕೊಳದಲ್ಲಿ ಒಂದು ಮೊಸಳೆ ಕಣ್ಮರೆಯಾದರೆ ಪವಾಡ ಸದೃಶದಂತೆ ಇನ್ನೊಂದು ಮೊಸಳೆ ಪ್ರತ್ಯಕ್ಷವಾಗುತ್ತದೆ ಎಂಬ ಮಾತಿದೆ ಇಲ್ಲಿರುವ ಮೊಸಳೆಯ ಹೆಸರು ಬಬ್ಯಾ ಎಂದಾಗಿತ್ತು ಕಳೆದ ವರ್ಷ ಅಕ್ಟೋಬರ್ ನಲ್ಲಿ ಬಬ್ಯಾ ಮೊಸಳೆ ಹರಿಪಾದ ಸೇರಿತ್ತು ಬಬ್ಯಾ ಮೊಸಳೆ ಕಣ್ಮರೆಯಾಗಿ ಒಂದು ವರ್ಷ ಒಂದು ತಿಂಗಳಲ್ಲಿ ಮತ್ತೊಮ್ಮೆ ಪವಾಡ ಸದೃಶ್ಯವೆಂಬಂತೆ ಮರಿ ಮೊಸಳೆ ಸರೋವರದಲ್ಲಿ ಪ್ರತ್ಯಕ್ಷವಾಗಿದೆ ಬಬ್ಯಾ ಎಂಬ ಮೊಸಳೆ ಅನಂತಪದ್ಮನಾಭ ದೇವರಪೂಜೆ ನಂತರ ನೀಡುವ ಪ್ರಸಾದವನ್ನಷ್ಟೇ ಸ್ವೀಕರಿಸುತ್ತಿತ್ತು ಭಕ್ತರು ನಿರ್ಭಯವಾಗಿ ಬಬ್ಯಾ ಮೊಸಳೆಗೆ ತಮ್ಮ ಕೈಗಳಿಂದ ಆಹಾರ ಪ್ರಸಾದವನ್ನು ನೀಡುತ್ತಿದ್ದರು ಬಬ್ಯಾ ಎಂಬ ಮೊಸಳೆ ದೈವಾಂಶ ಸಂಭೂತ ಎಂದು ಭಕ್ತರು ಹೇಳುತ್ತಾರೆ
ಬಬ್ಯಾ ಎಂಬ ಮೊಸಳೆಗೆ 75 ವರ್ಷಕ್ಕೂ ಹೆಚ್ಚು ವಯಸ್ಸಾಗಿತ್ತು ಸುಧೀರ್ಘ ವರ್ಷಗಳಿಂದ ಈ ಮೊಸಳೆ ಈ ಪರಿಸರದಲ್ಲಿ ಇತ್ತು ಸ್ಥಳೀಯರ ಪ್ರಕಾರ ಬ್ರಿಟಿಷರ ಆಳ್ವಿಕೆ ಕಾಲದ ಸಮಯದಲ್ಲಿ ಈ ಮೊಸಳೆ ಬರುವ ಮೊದಲು ಇನ್ನೊಂದು ಬಬ್ಯಾ ಮೊಸಳೆ ಇತ್ತು ಎಂದು ಹೇಳಲಾಗುತ್ತದೆ ಬ್ರಿಟಿಷ್ ಸೈನಿಕನ್ನೊಬ್ಬ 1945ರಲ್ಲಿ ದೇವಸ್ಥಾನದ ಆವರಣವನ್ನು ಪ್ರವೇಶಿಸಿ ಮೊದಲನೇ ಬಬ್ಯಾ ಎಂಬ ಮೊಸಳೆಯನ್ನು ಕೊಂದು ಹಾಕಿದ್ದ ಆ ಸೈನಿಕ ಮೊದಲನೇ ಮೊಸಳೆಯನ್ನು ಕೊಂದು ಹಾಕಿದ್ದ ಕೂಡಲೇ ಹಾವು ಕಚ್ಚಿ ಸತ್ತು ಹೋಗಿದ್ದ ಎಂಬುದು ಸ್ಥಳೀಯರ ಕಥೆ ಮೊದಲನೆಯ ಮೊಸಳೆ ಕಣ್ಮರೆಯಾಗಿ ಮೂರನೆಯ ದಿನಕ್ಕೆ ಎರಡನೆಯ ಬಬ್ಯಾ ಎಂಬ ಮೊಸಳೆ ಪ್ರತ್ಯಕ್ಷವಾಗಿತ್ತು ಇತಿಹಾಸ ಮತ್ತೊಮ್ಮೆ ಮರುಕಳಿಸಿದೆ ಎರಡನೆಯ ಬಬ್ಯಾ ಕಣ್ಮರೆಯಾಗಿ ಒಂದು ವರ್ಷ ಒಂದು ತಿಂಗಳಿಗೆ ಮತ್ತೆ ಮೂರನೆಯ ಬಬ್ಯಾ ಸರೋವರದಲ್ಲಿ ಕಾಣಿಸಿಕೊಂಡಿದೆ ಇದು ಅನಂತಪದ್ಮನಾಭ ದೇವರ ಪವಾಡವೇ ಸರಿ