ಕುಂದಾಪುರ ಕುಂಭಾಶಿಯ ಶ್ರೀ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಭಕ್ತಾದಿಗಳ ನೆರವಿನಿಂದ ಸುಮಾರು ಒಂದು ಕೋಟಿ ರೂಪಾಯಿಗಳಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿದ ದಾರುಶಿಲ್ಪದ ಮೇಲ್ಚಾವಣಿ ಮತ್ತು ರಜತ ವಸಂತ ಮಂಟಪವನ್ನು ಭಾನುವಾರ ಅಕ್ಷಯ ತೃತೀಯ ದಿನದಂದು ಶ್ರೀದೇವರಿಗೆ ಸಮರ್ಪಿಸಲಾಯಿತು ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ದೀಪ ಬೆಳಗಿಸುವ ಮೂಲಕ ದಾರು ಶಿಲ್ಪ ಮೇಲ್ಚಾವಣಿ ಮತ್ತು ರಜತ ವಸಂತ ಮಂಟಪವನ್ನು ಈ ದೇವರಿಗೆ ಸಮರ್ಪಿಸಿದ್ದಾರೆ
ಪಲಿಮಾರು ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀ ಶ್ರೀ ವಿದ್ಯಾರಾಜೇಶ್ವರ ತೀರ್ಥರು ಮಾತನಾಡಿ ಇಂತಹ ಪುಣ್ಯ ಕಾರ್ಯದ ಫಲಗಳು ಶೀಘ್ರವಾಗಿ ಭಕ್ತರಿಗೆ ಸಿಗಲಿದೆ ಎಂದರು ಖ್ಯಾತ ಶಿಲ್ಪಿಗಳಾದ ಉಪ್ಪುಂದದ ಸುಕುಮಾರ ಗುಡಿಗಾರ ಮತ್ತು ಕೃಷ್ಣ ಗುಡಿಗಾರ ಹಾಗೂ ಬಿಜಾಡಿಯ ಶಿಲ್ಪಿ ಪ್ರಭಾಕರ್ ಆಚಾರ್ಯ ಮತ್ತು ಸಹೋದರರು ಹಾಗೂ ದಾನಿಗಳಿಗೆ ಮತ್ತು ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದ ಭಕ್ತರನ್ನು ಈ ಪಾದರು ಗೌರವಿಸಿ ಸನ್ಮಾನಿಸಿದರು ಹಿರಿಯ ಅನುವಂಶಿಕ ಮುಕ್ತೇಸರರಾದ ಕೆ ಸೂರ್ಯನಾರಾಯಣ ಉಪಾಧ್ಯಾಯರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು
ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮುಕ್ತೇಸರರಾದ ಶ್ರೀ ಕೆ ರಮಣ ಉಪಾಧ್ಯಾಯ ಹಿರಿಯ ಅನುವಂಶಿಕ ಮುಕ್ತೇಸರರಾದ ಕೆ ಸೂರ್ಯನಾರಾಯಣ ಉಪಾಧ್ಯಾಯ ಮುಕ್ತೇಶ್ವರರಾದ ಕೆ ವಿಠಲ್ ಉಪಾಧ್ಯಾಯ ಅನುವಂಶಿಕ ಪರ್ಯಾಯ ಅರ್ಚಕ ಕೆ ದೇವಿದಾಸ್ ಉಪಾಧ್ಯಾಯ ಊರ ಪರ ಊರ ಭಕ್ತರು ಉಪಸ್ಥಿತರಿದ್ದರು
ದೇವಾಲಯದ ಸಿಬ್ಬಂದಿ ವಿಶ್ವನಾಥ್ ಐತಾಳ್ ನಿರೂಪಿಸಿದ ಕಾರ್ಯಕ್ರಮದಲ್ಲಿ ದೇವಳದ ಅನುವಂಶಿಕ ಆಡಳಿತ ಮುಕ್ತೇಸರರಾದ ಶ್ರೀ ರಮಣ ಉಪಾಧ್ಯಾಯ ಸ್ವಾಗತಿಸಿ ದೇವಳದ ವ್ಯವಸ್ಥಾಪಕ ನಟೇಶ್ ಕಾರಂತ್ ಧನ್ಯವಾದವಿತ್ತರು