Home » ಸಂಪನ್ನಗೊಂಡ ಆನೆಗುಡ್ಡೆ ಬ್ರಹ್ಮರಥೋತ್ಸವ
 

ಸಂಪನ್ನಗೊಂಡ ಆನೆಗುಡ್ಡೆ ಬ್ರಹ್ಮರಥೋತ್ಸವ

by Kundapur Xpress
Spread the love

ಕುಂದಾಪುರ : ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವರ ಬ್ರಹ್ಮರಥೋತ್ಸವ ಹಾಗೂ ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗವು ಸಡಗರ ಸಂಭ್ರಮದಿಂದ ಸಂಪನ್ನಗೊಂಡಿತು ದೇಗುಲವನ್ನು ಹೂವಿನ ಅಲಂಕಾರ ಹಾಗೂ ವಿಶೇಷ ದೀಪಲಂಕಾರಗಳಿಂದ  ಶೃಂಗರಿಸಲಾಗಿತ್ತು ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿ ಸೇವೆಯಲ್ಲಿ ಪಾಲ್ಗೊಂಡರು

ಸಂಜೆ ಸುಡುಮದ್ದು ಪ್ರದರ್ಶನ ಹಾಗೂ ಪಲ್ಲಕ್ಕಿ ಉತ್ಸವ ನಡೆಯಿತು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ಸಾಲಿಗ್ರಾಮದ ಸತೀಶ್ ದೇವಾಡಿಗ ಮತ್ತು ಬಳಗದವರಿಂದ ಸ್ಯಾಕ್ಸ್ಫೋನ್‌ ವಾದನ ಮತ್ತು ಸಂಜೆ 7.00 ರಿಂದ ಕುಣಿತ ಭಜನೆ ಹಾಗೂ  ರಾತ್ರಿ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿಯವರಿಂದ ಪೌರಾಣಿಕ ಪ್ರಸಂಗ ಯಕ್ಷಗಾನ ಪ್ರದರ್ಶನ ನಡೆಯಿತು

ಬ್ರಹ್ಮರಥೋತ್ಸವ ದಿನದಂದು ಯಾವುದೇ ಅಹಿತರ ಘಟನೆ ನಡೆದಂತೆ ಮುಂಜಾಗ್ರತ ಕ್ರಮವನ್ನು ಅನುಸರಿಸಲಾಗಿತ್ತು ಡಿ ವೈ ಎಸ್ ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ನಂಜಪ್ಪ  ಕುಂದಾಪುರ ಸಂಚಾರ ಠಾಣೆಯ ಉಪ ನಿರೀಕ್ಷಕರಾದ  ಪ್ರಸಾದ್ ರವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿತ್ತು

ಈ ಸಂದರ್ಭದಲ್ಲಿ ದೇವಳದ ಅನುವಂಶಿಕ ಆಡಳಿತ ಮೊಕ್ತಸರ ಕೆ.ಶ್ರೀರಮಣ ಉಪಾಧ್ಯಾಯ, ಅನುವಂಶಿಕ ಪರ್ಯಾಯ ಅರ್ಚಕರಾದ ಕೆ.ಕೃಷ್ಣಾನಂದ ಉಪಾಧ್ಯಾಯ ಮತ್ತು ಸಹೋದರರು, ಅನುವಂಶಿಕ ಆಡಳಿತ ನಿವೃತ್ತ ಮೊಕೇಸರ ಕೆ.ಸೂಯ್ಯನಾರಾಯಣ ಉಪಾಧ್ಯಾಯ, ಅನುವಂಶಿಕ ಮೊಕೇಸರ ರಾದ ಕೆ.ಪದ್ಮನಾಭ ಉಪಾಧ್ಯಾಯ, ಕೆ.ನಿರಂಜನ್ ಉಪಾಧ್ಯಾಯ, ಮ್ಯಾನೇಜರ್ ನಟೇಶ್ ಕಾರಂತ್, ಆಡಳಿತ ಮಂಡಳಿ ಸದಸ್ಯರು, ಉಪಾಧ್ಯಾಯ ಕುಟುಂಬದ ಸದಸ್ಯರು, ದೇವಳದ ಅರ್ಚಕ ಮತ್ತು ಸಿಬ್ಬಂದಿ ವರ್ಗ, ಭಕ್ತರು ಉಪಸ್ಥಿತರಿದ್ದರು.

ಕುಂದಾಪುರ ಸಹಾಯಕ ಆಯುಕ್ತ ಮಹೇಶ್ಚಂದ್ರ, ಧಾರ್ಮಿಕ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ ಕುಂಭಾಸಿ ಗ್ರಾಪಂ ಮಾಜಿ ಅಧ್ಯಕ್ಷೆ ಶ್ವೇತಾ ಶ್ರೀನಿಧಿ, ಕುಂಭಾಸಿ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಮಂಜುನಾಥ್ ಕಾಮತ್, ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

 

Related Articles

error: Content is protected !!