Home » ಬಾರ್ಕೂರು ಭೈರವ ಗಣಪತಿ ದೇವಸ್ಥಾನ 
 

ಬಾರ್ಕೂರು ಭೈರವ ಗಣಪತಿ ದೇವಸ್ಥಾನ 

by Kundapur Xpress
Spread the love

ಬಾರ್ಕೂರು  : ಮಹಾಲಿಂಗೇಶ್ವರ ಭೈರವ ಗಣಪತಿ ದೇವಸ್ಥಾನ  ಅತ್ಯಂತ ಪುರಾತನವಾದ  ಅತ್ಯಂತ ಸುಂದರ  ಶಿಲ್ಪ ಕಲೆಯಿಂದ  ಕಂಗೊಳಿಸುತ್ತಿರುವಂತಹ ದೇವಾಲಯ  ಬಾರ್ಕೂರನ್ನು ದೇವಾಲಯಗಳ ತವರು ಎಂದು  ಹೇಳಲಾಗುತ್ತಿತ್ತು. ಈ ಬಾರ್ಕೋರಿನ ಪುಣ್ಯಭೂಮಿಯಲ್ಲಿ ಅನೇಕ ರಾಜ ಮಹಾರಾಜರು  ಆಳಿ ಹೋದಂತಹ ನಿದರ್ಶನಗಳಿವೆ. ಬಾರ್ಕೂರು ಮಹಾಲಿಂಗೇಶ್ವರ ಭೈರವ ಗಣಪತಿ ದೇವಸ್ಥಾನ  ಸಂಪೂರ್ಣವಾಗಿ ಕಲ್ಲಿನಿಂದಲೇ  ನಿರ್ಮಿತವಾದಂತ ಅತಿ ನಯನ ಮನೋಹರ ವಾದಂತಹ ದೇವಸ್ಥಾನ.

ಹಂಪಿಯಲ್ಲಿ ಕಾಣುವ ಶಿಲ್ಪಕಲೆಯನ್ನು  ಇಲ್ಲೂ ಕೂಡ ಕಾಣಬಹುದು. ಈ ದೇವಸ್ಥಾನ  ಬಾರ್ಕೂರಿನ ಹಂಪಿ ಎಂದೇ ಪ್ರಖ್ಯಾತವಾಗಿದೆ. ಈ ದೇವಸ್ಥಾನದಲ್ಲಿ ಮಹಾಲಿಂಗೇಶ್ವರ ಮತ್ತು ಭೈರವ ಗಣಪತಿಯನ್ನು ಆರಾಧಿಸಲಾಗುತ್ತದೆ. ದೇವಸ್ಥಾನದ ಪಕ್ಕದಲ್ಲಿ ಇರುವ ಒಂದು ದೊಡ್ಡ ಕೆರೆಯನ್ನು ಚೌಳಿ ಕೆರೆ  ಎಂದು ಹೇಳಲಾಗುತ್ತದೆ. ಈ ದೇವಸ್ಥಾನದ ದ್ವಾರವನ್ನು ಪ್ರವೇಶಿಸುತ್ತಿದ್ದಂತೆ  ನಾವು  ಅನೇಕ ಶಿಲ್ಪ ಕಲೆಯ  ಕೆತ್ತನೆಗಳನ್ನು ಇಲ್ಲಿ ಕಾಣಬಹುದು. ಅತ್ಯಂತ ಸುಂದರ ಮತ್ತು ನಯನ ಮನೋಹರವಾದಂತಹ ಶಿಲ್ಪಕಲೆಯ ಕೆತ್ತನೆಗಳು ಭಕ್ತರನ್ನು  ಮಂತ್ರಮುಗ್ತವನ್ನಾಗಿಸುತ್ತವೆ.

ಈ ದೇವಾಲಯವು ಚೋಳರ ಕಾಲದಲ್ಲಿ ಇತ್ತು ಎಂದು ಅನೇಕರು ಹೇಳುತ್ತಾರೆ. ದೇವಾಲಯದ ಒಳಗಿನ ಭಾಗದಲ್ಲಿ ಮಹಾಲಿಂಗೇಶ್ವರ ದೇವರು ಮತ್ತು ಭೈರವ ಗಣಪತಿ  ದೇವರ ಎರಡು  ಗುಡಿಗಳಿವೆ. ದೇವಸ್ಥಾನದ ಒಳಗಡೆ ಇರುವ ಪ್ರತಿಯೊಂದು ಕಂಬದಲ್ಲೂ ಅತ್ಯಂತ ವಿಶೇಷವಾದಂತಹ ಶಿಲ್ಪ ಕಲೆಯ  ಕೆತ್ತನೆಗಳನ್ನು ಕೆತ್ತಲಾಗಿದೆ. ಈ ದೇವಾಲಯದ ಭೈರವ ಗಣಪತಿಗೆ ಅತ್ಯಂತ ವಿಶೇಷವಾದಂತಹ  ಶಕ್ತಿ ಇದೆ. ಈ ದೇವಾಲಯದ ಭೈರವ ಗಣಪತಿಗೆ ಕಡಲೆ ನೈವೇದ್ಯ ಎಂದರೆ ಅತ್ಯಂತ ಅಚ್ಚುಮೆಚ್ಚು. ಈ ಕಡಲೆ ನೈವೇದ್ಯವನ್ನು ದೇವರಿಗೆ ಅರ್ಪಿಸಿ  ದಿನನಿತ್ಯ ಆಹಾರದೊಂದಿಗೆ ಸೇವಿಸಿದರೆ ಮಕ್ಕಳ ಬುದ್ಧಿಶಕ್ತಿ ಮತ್ತು ಮಕ್ಕಳು ಕಲಿಯುವುದರಲ್ಲಿ  ಆಸಕ್ತಿ  ಹೆಚ್ಚಿಸಿಕೊಳ್ಳುತ್ತಾರೆ. ವಯಸ್ಕರ ದಿನನಿತ್ಯ ಈ ಕಡಲೆ ನೈವೇದ್ಯವನ್ನು ಸೇವಿಸುವುದರಿಂದ  ತಮ್ಮ ಉದ್ಯೋಗದಲ್ಲಿ ಯಶಸ್ಸನ್ನು  ಕಾಣುತ್ತಾರೆ. ಗಣಪತಿಯ ಈ ಪವಾಡಕ್ಕೆ ಇಲ್ಲಿ ಬರುತ್ತಿರುವ ಹಲವಾರು ಭಕ್ತರೇ ಸಾಕ್ಷಿ.

ವಿಜಯನಗರದ ಅರಸರು ಇಲ್ಲಿ ದೀಪ ಉತ್ಸವ ಮಾಡಿದಂತಹ ಉಲ್ಲೇಖವು ಕೂಡ ಇಲ್ಲಿಯ ಶಾಸನದಲ್ಲಿ  ಸಿಗುತ್ತದೆ. ಈ ದೇವಾಲಯವು  ಚೋಳರ , ಪಾಂಡವರ  ಸಮಯದಲ್ಲಿ ಇರುವಂತಹ ದೇವಾಲಯ ಇರಬಹುದು ಎಂದು  ಇಲ್ಲಿ ಇರುವಂತಹ ಅನೇಕರು ಅಭಿಪ್ರಾಯ ಪಡುತ್ತಾರೆ. ಉಡುಪಿಯಿಂದ ಸರಿ ಸುಮಾರು 19 km ದೂರದಲ್ಲಿರುವ ಈ ದೇವಾಲಯ ಭಕ್ತರನ್ನು  ಕೈಬೀಸಿ ಕರೆಯುತ್ತದೆ . ಇಲ್ಲಿಯ ಗಣಪತಿ  ಸೃಷ್ಟಿಸುವ ಪವಾಡಗಳಿಗೆ  ಇಲ್ಲಿಗೆ ಬರುವಂತಹ ಅನೇಕ ಭಕ್ತರೇ ಸಾಕ್ಷಿ 

ಪ್ರದೀಪ್‌ ,ಚನ್ಮಯಿ ಆಸ್ಪತ್ರೆ ಕುಂದಾಪುರ

 

   

Related Articles

error: Content is protected !!