ಕುಂದಾಪುರ : ಕುಂದಾಪುರ ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಶ್ರೀ ನಾಗಬೊಬ್ಬರ್ಯ ದೇವಸ್ಥಾನದಲ್ಲಿ ಫೆಬ್ರವರಿ 2ನೇ ತಾರೀಕಿನಂದು ನಡೆಯುವ ನಾಗಮಂಡಲೋತ್ಸವದ ಪೂರ್ವಭಾವಿಯಾಗಿ ಚಪ್ಪರ ಮೂಹೂರ್ತಕ್ಕೆ ಚಾಲನೆ ನೀಡಲಾಯಿತು
ನಾಗಬೊಬ್ಬರ್ಯ ದೇವಸ್ಥಾನದ ಪ್ರಮುಖ ಅರ್ಚಕರಾದ ಶ್ರೀ ನಾರಾಯಣ ಹೊಳ್ಳರ ನೇತೃತ್ವದಲ್ಲಿ ಸೇವಾಕರ್ತರಾದ ಕೃಷ್ಣಯ್ಯ ಶೇರಿಗಾರ್ ಹಾಗೂ ಸದಾಶಿವ ಶೇರಿಗಾರ್ ಮನೆಯವರ ಮೂಲಕ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು
ಈ ಸಂದರ್ಭದಲ್ಲಿ ಶ್ರೀ ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ವಾಸುದೇವ ಯಡಿಯಾಳ್ ಕುಂದಾಪುರ ಪುರಸಭೆಯ ಅಧ್ಯಕ್ಷರಾದ ಮೋಹನ್ದಾಸ್ ಶೆಣೈ ಉದ್ಯಮಿ ಸೂರ್ಯಕಾಂತ್ ದಫೇದಾರ್ ನಿವೃತ್ತ ಮುಖ್ಯೋಪಾಧ್ಯಾಯ ಡಿ. ಕೆ ಅಣ್ಣಪ್ಪಯ್ಯ ಮಾಸ್ಟರ್ ಕುಂದಾಪುರ ಪುರಸಭಾ ಸದಸ್ಯರಾದ ದೇವಕಿ ಸಣ್ಣಯ್ಯ ಹಾಗೂ ಶಶಿರಾಜ್ ಪೂಜಾರಿ ಪ್ರವೀಣ್ ಕುಮಾರ್ ನಾಗಬೊಬ್ಬರ್ಯ ದೇವಸ್ಥಾನದ ಕಾರ್ಯದರ್ಶಿ ಯೋಗೀಶ್ ಕಿಣಿ ರವಿರಾಜ ಶೇಟ್ ಶ್ರೀ ನಾಗಬೊಬ್ಬರ್ಯ ದೇವಸ್ಥಾನ ಸಮಿತಿಯ ಸದಸ್ಯರು ಮತ್ತು ದೇಗುಲದ ಭಕ್ತರು ಉಪಸ್ಥಿತರಿದ್ದರು