ಕುಂದಾಪುರ : ಹಟ್ಟಿಯಂಗಡಿಯ ಪುರಾತನ ಶ್ರೀ ಲೋಕನಾಥೇಶ್ವರ ದೇವಸ್ಥಾನದ ಶ್ರೀ ಮನ್ಮಹಾರಥೋತ್ಸವವು ಇಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಮಾ. 20 ರಿಂದ ವಾರ್ಷಿಕ ಜಾತ್ರೋತ್ಸವದ ವಿವಿಧ ಧಾರ್ಮಿಕ ಕಾಠ್ಯಕ್ರಮ ಆರಂಭಗೊಂಡಿದ್ದು, ಮಾ. 21 ರಂದು ಧ್ವಜಾರೋಹಣ, ಮಹಾಪೂಜೆ, ಮಾ.22-23 ರಂದು ಕಲಶಾಭಿಷೇಕ, ಮಹಾಪೂಜೆ ಸಹಿತ ವಿವಿಧ ಧಾರ್ಮಿಕ ಪೂಜಾ ವಿಧಿಗಳು ನಡೆಯಿತು. ಮಾ. 24 ರಂದು ರಾತ್ರಿ 11 ಗಂಟೆಗೆ ಜಟ್ಟಿಗೆರಾಯನ ಸನ್ನಿಧಿಯಲ್ಲಿ ಸರ್ವ ಸೇವೆಯೊಂದಿಗೆ ವಿಶೇಷ ಪೂಜೆ, ಸಂದರ್ಶನದೊಂದಿಗೆ ಲೋಕನಾಥೇಶ್ವರ ಸ್ವಾಮಿಯು ದೇಗುಲಕ್ಕೆ ಆಗಮಿಸುವ ವಿಶಿಷ್ಟ ಸಂಪ್ರದಾಯ ನೆರವೇರಿದೆ
ಇಂದು ಬೆಳಗ್ಗೆ ಕಲಾತತ್ವ ಹೋಮ, ಕಲಶಾಭಿಷೇಕ, ಅಪರಾಹ್ನ 12 ಕ್ಕೆ ನಿತ್ಯ ಪೂಜೆ, ಆ ಬಳಿಕ ಶ್ರೀ ಮನ್ಮಹಾರಥೋತ್ಸವ, ಅನ್ನಸಂತರ್ಪಣೆ, ಅಪರಾಹ್ನ 3.30 ಕ್ಕೆ ಹಟ್ಟಿಯಂಗಡಿಯ ಮಾರಲದೇವಿ ಭಜನಾ ಮಂಡಳಿಯಿಂದ ಕುಣಿತ ಭಜನೆ, ಸಂಜೆ ರಥೋತ್ಸವದ ವಿಶೇಷ ಸೇವೆಗಳು, ಭೂತಬಲಿ, ರಾತ್ರಿ ಮಾರಣಕಟ್ಟೆಯ ಶ್ರೀಬ್ರಹ್ಮಲಿಂಗೇಶ್ವರ ಮೇಳದಿಂದ ಯಕ್ಷಗಾನ ಬಯಲಾಟ ನಡೆಯಲಿದೆ. ಮಾ. 26 ರಂದು ಅಷ್ಟಾವದಾನ ಸೇವೆ, ಸರ್ವ ಸೇವೆ, ಅಂಕುರಾರ್ಪಣೆ, ಪ್ರಸಾದ ವಿತರಣೆ, ಮಹಾಪೂಜೆ, ಉತ್ಸವ ಬಲಿ, ರಂಗಪೂಜೆ, ರಾತ್ರಿ 2.30ಕ್ಕೆ ಅವಭ್ರಥ ಬಲಿ, ಓಕುಳಿ ಸ್ನಾನ, ಹೊಳೆ ಉತ್ಸವ, ವಾಹನೋತ್ಸವ, ಧ್ವಜಾವರೋಹಣ, ಮಾ. 27 ರಂದು ಸಂಪ್ರೋಕ್ಷಣೆ, ಮಹಾಪೂಜೆ, ರಾತ್ರಿ ರಂಗಪೂಜೆಯೊಂದಿಗೆ ವಾರ್ಷಿಕ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ