KUNDAPUR : ಶ್ರೀಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಶ್ರೀ ಮನ್ಮಹಾರಥೋತ್ಸವ ಸೋಮವಾರ ಸಕಲ ವಾದ್ಯಘೋಷ ಗಳೊಂದಿಗೆ ವಿಜಂಭ್ರಣೆಯಿಂದ ನಡೆಯಿತು. ಕೊಲ್ಲೂರು ದೇವಸ್ಥಾನವನ್ನು ಹೂವಿನ ಅಲಂಕಾರದಲ್ಲಿ ಶೃಂಗರಿಸಲಾಗಿತ್ತು. ಸಾವಿರಾರು ಭಕ್ತದಿ ಗಳು ಆಗಮಿಸಿ, ಶ್ರೀ ಮೂಕಾಂಬಿಕೆ ಅಮ್ಮನವರ ದರ್ಶನ ಪಡೆದು ಅನ್ನಪ್ರಸಾದ ಸ್ವೀಕರಿಸಿದರು.
ಅರ್ಚಕ ನಿತ್ಯಾನಂದ ಅಡಿಗ ಅವರ ನೇತೃತ್ವದಲ್ಲಿ ಬೆಳಿಗ್ಗೆ ದೇವಳದಲ್ಲಿ ಮುಹೂರ್ತ ಬಲಿ, ಕ್ಷಿಪ್ರ ಬಲಿ, ಹಾಗೂ ರಥ ಬಲಿಯ ಬಳಿಕ ಕೊಲ್ಲೂರಿನ ರಥೋತ್ಸವದ ಪರಂಪರೆಯಂತೆ ಜೋಡಿ (ಎರಡು) ಉತ್ಸವ ಮೂರ್ತಿಗಳನ್ನು ಬ್ರಹ್ಮರಥದಲ್ಲಿ ಕುಳ್ಳಿರಿಸಿ, ರಥೋತ್ಸವ ನಡೆಸಲಾಯಿತು.
ಗಣಪತಿ ದೇವಸ್ಥಾನದವರೆಗೆ ರಥವನ್ನು ಎಳೆದು ರಥೋತ್ಸವ ನಡೆಸಲಾಯಿತು. ತೇರಿನ ಈ ವೈಭವವನ್ನು ಸಾವಿರಾರು ಭಕ್ತರು ಕಣ್ಣುಂಬಿಕೊಂಡರು. ಸಂಜೆಯ ಬಳಿಕ ಬ್ರಹ್ಮರಥವನ್ನುಶಂಕರ ಆಶ್ರಮದವರೆಗೆ ಎಳೆಯಲಾಗುತ್ತದೆ. ಕೊಲ್ಲೂರು ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಕುಂದಾಪುರ ಸಹಾಯಕ ಕಮಿಷನರ್ ರಶ್ಮಿ ಎಸ್.ಆರ್, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‌ಕುಮಾರ್ ಶೆಟ್ಟಿ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಪುಷ್ಪಲತಾ, ಬೈಂದೂರು ಮಾಜಿ ಶಾಸಕ ಬಿ.ಎಮ್. ಸುಕುಮಾರ್ ಶೆಟ್ಟಿ ದೇವಳದ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯರಾದ ವಂಡಬಳ್ಳಿ ಜಯರಾಮ್ ಶೆಟ್ಟಿ ರತ್ನ ರಮೇಶ್ ಕುಂದರ್, ನರಸಿಂಹ ಹಳಗೇರಿ, ರಮೇಶ್ ಗಾಣಿಗ, ಕೊಲ್ಲೂರು ಪಂಚಾಯತ್ ಅಧ್ಯಕ್ಷೆ ವನಿತಾ ಉದಯ ಶೇರುಗಾರ್, ಉಪಾಧ್ಯಕ್ಷರು ನಾಗೇಶ್ ದಳಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಶಿವರಾಮ್ ಕೃಷ್ಣ ಭಟ್, ದೇವಳದ ತಂತ್ರಿಗಳಾದ ನಿತ್ಯಾನಂದ ಅಡಿಗ, ಗೋವಿಂದ ಅಡಿಗ, ಸುಬ್ರಮಣ್ಯ ಅಡಿಗ, ಚುಚ್ಚಿ ನಾರಾಯಣ ಶೆಟ್ಟಿ ಕಿಶನ್ ಹೆಗ್ಡೆ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ ಹಾಗೂ ಅರ್ಚಕರ ವೃಂದ ಮತ್ತು ದೇವಸ್ಥಾನ ಸಿಬ್ಬಂದಿ ಗಳು ಮತ್ತು, ಸಾವಿರಾರು ಭಕ್ತಾರು ಇದ್ದರು.