Home » ಮಲ್ಯರ ಮಠ
 

ಮಲ್ಯರ ಮಠ

by Kundapur Xpress
Spread the love

ಗಂಗೊಳ್ಳಿ : ಪಂಚಗಂಗಾವಳಿ ನದಿ ತೀರದಲ್ಲಿ ಶೋಭಿಸುತ್ತಿರುವ 350 ವರ್ಷ ಪುರಾತನವಾದ ಪುರಾಣ ಪ್ರಸಿದ್ಧ ಗಂಗೊಳ್ಳಿಯ ಮಲ್ಯರ ಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾಲಂಪ್ರತಿ ಜರಗುವ ಬ್ರಹ್ಮರಥೋತ್ಸವ ಫೆ.26ರಂದು ನಡೆಯಲಿದೆ.
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದೆ. ಫೆ.22ರಂದು ಧ್ವಜಾರೋಹಣದೊಂದಿಗೆ ಬ್ರಹ್ಮರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು ಫೆ.27 ರಂದು ಧ್ವಜಅವರೋಹಣದೊಂದಿಗೆ ಸಂಪನ್ನಗೊಳ್ಳಲಿದೆ. ಫೆ.25ರಂದು ಗಂಗೊಳ್ಳಿ ನಿನಾದ ಸಂಸ್ಥೆಯ ವತಿಯಿಂದ ಸಂಜೆ 6 ಗಂಟೆಗೆ ನಾಗೇಂದ್ರ ನಾಯಕ್ ಬೆಳ್ತಂಗಡಿ ಇವರಿಂದ ಭಜನಾ ಕಾರ್ಯಕ್ರಮ ಫೆ.24ರಂದು ರಾತ್ರಿ ಬಂಡಿ ಉತ್ಸವ, ಫೆ.25 ರಂದು ರಾತ್ರಿ ಹೂವಿನ ತೇರು, ಫೆ.26 ರಂದು ಸಂಜೆ 4 ಗಂಟೆಗೆ ಬ್ರಹ್ಮರಥೋತ್ಸವ, 27ರಂದು ಅವಭೃತ ಉತ್ಸವ, ಧ್ವಜ ಅವರೋಹಣ, ರಾತ್ರಿ 9 ಗಂಟೆಗೆ ಪಂಚಗಂಗಾವಳಿ ನದಿಯಲ್ಲಿ ಶ್ರೀ ದೇವರ ನಿರಾಟ ಉತ್ಸವ ಜರುಗಲಿದೆ. ರಥೋತ್ಸವದ ಅಂಗವಾಗಿ ಹಗಲು ಉತ್ಸವ, ರಾತ್ರಿ ಪಲ್ಲಕಿ ಉತ್ಸವ, ವಿಶೇಷ ಪೂಜೆ ಪುನಸ್ಕಾರಗಳು ನಡೆಯಲಿದೆ.

   

Related Articles

error: Content is protected !!