ಕುಂದಾಪುರ : ನಗರದ ಚಿಕ್ಕನಸಾಲು ರಸ್ತೆಯಲ್ಲಿರುವ ಶ್ರೀ ಮೈಲಾರೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಪ್ರತಿಷ್ಠೆಯ ದ್ವಿತೀಯ ವರ್ಧಂತ್ಯೋತ್ಸವವ ನಾಳೆ ಸೋಮವಾರ ದೇವಸ್ಥಾನದ ವಠಾರದಲ್ಲಿ ಜರುಗಲಿದೆ
ಶ್ರೀ ಮೈಲಾರೇಶ್ವರ ಶ್ರೀ ಗಣಪತಿ ಮತ್ತು ಪಾರ್ವತಿ ದೇವಿ ಹಾಗೂ ನವಗ್ರಹ ಪ್ರತಿಷ್ಠಾಪನೆಯ ಅಂಗವಾಗಿ ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ
ತಂತ್ರಿಗಳಾದ ಕೋಟ ಸೋಮಯಾಜಿಯವರ ಹಾಗೂ ದೇಗುಲದ ಪ್ರಧಾನ ಅರ್ಚಕರಾದ ಮಂಜುನಾಥ್ ಭಟ್ ಇವರ ನೇತೃತ್ವದಲ್ಲಿ ಶ್ರೀ ಮೈಲಾರೇಶ್ವರ ದೇವರಿಗೆ ಪಂಚವಿಂಶತಿ ಕಲಶ ಸ್ಥಾಪನೆ ಕಲಾ ಹೋಮ ಅಧಿವಾಸ ಹೋಮ ಶ್ರೀ ಗಣಪತಿ ಹಾಗೂ ದುರ್ಗಾಪರಮೇಶ್ವರಿ ಮತ್ತು ನವಗ್ರಹ ದೇವರಿಗೆ ನವ ಕುಂಭ ಕಲಶ ಸ್ಥಾಪನೆ ಅಧಿವಾಸ ಹೋಮ ಕಲಶಾಭಿಷೇಕ ಪೂರ್ವಕ ಮಹಾಪೂಜೆ ಮತ್ತು ಮಧ್ಯಾಹ್ನ 12:30 ಕ್ಕೆ ಪ್ರಸಾದ ವಿತರಣೆ ನಡೆಯಲಿದ್ದು ಮಧ್ಯಾಹ್ನ 1.00 ಗಂಟೆಗೆ ಅನ್ನಸಂತರ್ಪಣೆ ಜರುಗಲಿದೆ
ಸಂಜೆ 6.00 ರಿಂದ ರಂಗ ಪೂಜೆ ಸಂಜೆ 7:00 ರಿಂದ ಶ್ರೀ ದೇವರನ್ನು ಪಲ್ಲಕ್ಕಿಯಲ್ಲಿ ಇಟ್ಟು ಉತ್ಸವ ಮೆರವಣಿಗೆ ನಡೆಯಲಿದೆ ಎಂದು ಆಡಳಿತ ಅಧಿಕಾರಿ ಕಾಂತರಾಜ್ ತಿಳಿಸಿದ್ದಾರೆ