ಕುಂದಾಪುರ : ಇಲ್ಲಿನ ಮೀನು ಮಾರುಕಟ್ಟೆ ರಸ್ತೆಯ ಮೂಡೇರಿಯ ಶ್ರೀ ನಾಗಬೊಬ್ಬರ್ಯ ದೇವಸ್ಥಾನದಲ್ಲಿ ದಿ| ಜಿ. ಕಮಲಾ ಮತ್ತು ದಿ| ಜಿ. ಸುಬ್ಬಣ್ಣ ಶೇರೆಗಾರರು ನಿವೇದಿಸಿಕೊಂಡಂತೆ ಅವರ ಮಕ್ಕಳಾದ ಕೃಷ್ಣಯ್ಯ ಶೇರಿಗಾರ್ ಮತ್ತು ಸದಾಶಿವ ಶೇರಿಗಾರ್ ನೆರವೇರಿಸಿದ ಚತುಃ ಪವಿತ್ರ ನಾಗಮಂಡಲ ಸೇವೆಯ ಅಂಗವಾಗಿ ರವಿವಾರ ಬೆಳಗ್ಗೆ ನಾಗಪಾತ್ರಿಗಳ ಮೆರವಣಿಗೆ, ಶ್ರೀ ನಾಗದೇವರ ಸಂದರ್ಶನ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು
ಬೆಳಗ್ಗೆ ಶ್ರೀ ನಾಗದೇವರಿಗೆ ಪಂಚವಿಂಶತಿ ಬ್ರಹ್ಮ ಕಲಶ ಸ್ಥಾಪನೆ, ಪ್ರಧಾನ ಹೋಮ, ಆಶ್ಲೇಷಾ ಬಲಿ ಉದ್ಯಾಪನ ಹೋಮ, ಕಲಾತತ್ವ ಹೋಮ, ಗಾಯತ್ರಿ ಹೋಮ, ಗಾಯತ್ರಿ ಜಪ, ನಾಗಮೂಲಮಂತ್ರ ಜಪ, ದಾನಾದಿಗಳು, ಶ್ರೀ ನಾಗದೇವರಿಗೆ ಬ್ರಹ್ಮ ಕಲಶಾಭಿಷೇಕ, ವಟು ಬ್ರಾಹ್ಮಣರ ಆರಾಧನೆ, ಆಚಾರ್ಯರ ಪೂಜೆ, ದಂಪತಿ ಪೂಜೆ, ಸುವಾಸಿನಿ ಪೂಜೆ, ಮಹಾಪೂಜೆ, ಮಹಾಮಂಗಳಾರತಿ ನಡೆಯಿತು, ನಾಗಪಾತ್ರಿ ಬಡಾಕೆರೆಯ ವೇ|ಮೂ| ಬಿ. ಲೋಕೇಶ ಅಡಿಗ ಅವರಿಂದ ಶ್ರೀ ನಾಗದೇವರ ಸಂಧರ್ಶನ ನೆರವೇರಿತು, ಪಲ್ಲ ಪೂಜೆ, ವಟು ಆರಾಧನೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.
ವೈಭವದ ಮೆರವಣಿಗೆ
ಶೃಂಗೇರಿ ಶ್ರೀ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ, ನಾಗಪಾತ್ರಿ ಬಡಾಕೆರೆಯ ವೇ|ಮೂ। ಬಿ. ಲೋಕೇಶ ಅಡಿಗ ಅವರನ್ನುಪುರಸಭೆಯ ಕಚೇರಿ ಬಳಿಯಿಂದ ಮೂಡೇರಿಯ ಶ್ರೀ ನಾಗದೊಬ್ಬರ್ಯ ದೇವಸ್ಥಾನಕ್ಕೆ ಪೂರ್ಣಕುಂಭಸ್ವಾಗತದೊಂದಿಗೆ, ವಿಶೇಷ ಮೆರವಣಿಗೆ ಮೂಲಕ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು