ಕೋಟ : ಇಲ್ಲಿನ ಸಾಸ್ತಾನದ ಸಮೀಪ ಕೋಡಿತಲೆಯ ಪ್ರಸಿದ್ಧ ದೈವಸ್ಥಾನ ಶ್ರೀ ನಾಲ್ಕುಪಾದ ಹ್ಯಾಗೂಳಿ ಹಾಗೂ ಕೋಳೆರಾಯ ಮತ್ತು ಪರಿವಾರ ದೈವಗಳ ದೈವಸ್ಥಾನದ ವಾರ್ಷಿಕ ಜಾತ್ರೆಯ ಗೆಂಡ ಸೇವೆ ಭಕ್ತ ಸಮುದಾಯದ ಭಕ್ತಿಭಾವ ನಡುವೆ ಸಂಪನ್ನಗೊಂಡಿತು.
ಆ ಪ್ರಯುಕ್ತ ಪಂಚ ವಿಂಶತಿ ಕಲಶ ಸ್ಥಾಪನೆ, ಅಧಿವಾಸ ಹೋಮ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು, ಜ.22ರಿಂದ ಮೊದಲ್ಗೊಂಡು 23ರ ರಾತ್ರಿ `ಗೆಂಡಸೇವೆ ಮತ್ತು, 24ರಂದು ಮಧ್ಯಾಹ್ನ ಹರಕೆಯ ರೂಪದಲ್ಲಿ `ತುಲಾಭಾರ ಸೇವೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.
ವಾರ್ಷಿಕ ಜಾತ್ರೋತ್ಸದ ಹಿನ್ನಲ್ಲೆ ಸಾವಿರಾರು ಭಜಕ್ತಾಧಿಗಳು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿ ಶ್ರೀ ದೇವರ ದರ್ಶನ ಪಡೆದರು. ದೈವಸ್ಥಾನದ ಪ್ರದಾನರ್ಚಕ ಕೊರಗ ಪೂಜಾರಿ ದೈವ ದೇವರುಗಳಿಗೆ ಧಾರ್ಮಿಕ ವಿಧಿವಿಧಾನಗಳನ್ನು ಪೂಜಾ ಕೈಂಕರ್ಯವನ್ನು ನೆರವೆರಿಸಿದರು.
ಧಾರ್ಮಿಕ ವಿಧಿವಿಧಾನಗಳನ್ನು ತಂತ್ರಿಗಳಾದ ಬಾರಕೂರು ವೇ.ಮೂ.ರಮೇಶ್ ಭಟ್ ನೆರವೆರಿಸಿದರು.
ದರ್ಶನ ಸೇವೆಯನ್ನು ನಾಲ್ಕು ಪಾದದ ಹೈಗುಳಿ ಪಾತ್ರಿ ಬೇಡು ಪೂಜಾರಿ,ಕೋಳೆರಾಯನ ಪಾತ್ರಿ ರತ್ನಾಕರ ಕಾರ್ವಿ ನೆರವೆರಿಸಿದರು.
ದೈವಸ್ಥಾನದ ಅಧ್ಯಕ್ಷ ಪದ್ಮನಾಭ ಪೂಜಾರಿ, ಕಾರ್ಯದರ್ಶಿ ಸುರೇಶ್ ಕುಂದರ್ ಐರೋಡಿ, ಮಹಾಬಲ ಕುಂದರ್, ನಿತೀನ್ ಪೂಜಾರಿ, ಭಾಸ್ಕರ್ ಪೂಜಾರಿ, ಕೋಶಾಧಿಕಾರಿ ಅಣ್ಣಪ್ಪ ಕುಂದರ್, ಪ್ರಧಾನ ಅರ್ಚಕ ಕೊರಗ ಪೂಜಾರಿ ಮತ್ತಿತರರು ಇದ್ದರು.
ಇಂದು 25 ಗೋಂದಲ ಸೇವೆ :
ಪ್ರತಿವರ್ಷದಂತೆ ಗೋಂದಲ ಸೇವೆಯು ಜ.25ರ ಸಂಜೆ 6.00 ರಿಂದ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.