Home » ಬ್ರಹ್ಮಕಲಶೋತ್ಸವ, 65ನೇ ಭಜನಾ ಮಂಗಲೋತ್ಸವ ಸಂಪನ್ನ
 

ಬ್ರಹ್ಮಕಲಶೋತ್ಸವ, 65ನೇ ಭಜನಾ ಮಂಗಲೋತ್ಸವ ಸಂಪನ್ನ

ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ

by Kundapur Xpress
Spread the love

ಉಡುಪಿ : ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಶ್ರೀ ವಿಠೋಬ ಭಜನಾ ಮಂದಿರದಲ್ಲಿ ನಡೆದ 65ನೇ ಭಜನಾ ಮಂಗಲೋತ್ಸವಕ್ಕೆ ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಅವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಬ್ರಹ್ಮಕಲಶೋತ್ಸವವು ದಯಾಕರ ಶಾಂತಿ ಬನ್ನಂಜೆ ಅವರ ಪೌರೋಹಿತ್ಯದಲ್ಲಿ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ, ಸಂಘದ ಅಧ್ಯಕ್ಷ ಎ.ಶಿವಕುಮಾರ್ ಅಂಬಲಪಾಡಿ, ಗೌರವಾಧ್ಯಕ್ಷ ಗೋಪಾಲ್ ಸಿ. ಬಂಗೇರ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು, ಪಠೇಲರ ಮನೆ ಜಯಕರ ಶೆಟ್ಟಿ ಅಂಬಲಪಾಡಿ, ಸಂಘದ ಉಪಾಧ್ಯಕ್ಷ ಶಿವದಾಸ್ ಪಿ., ಭಜನಾ ಸಂಚಾಲಕ ಕೆ.ಮಂಜಪ್ಪ ಸುವರ್ಣ, ವಿದುಷಿ ಉಷಾ ಹೆಬ್ಬಾರ್ ಮಣಿಪಾಲ, ಮಹಿಳಾ ಘಟಕದ ಸಂಚಾಲಕಿ ಗೋದಾವರಿ ಎಮ್. ಸುವರ್ಣ, ಗೌರವ ಸಂಚಾಲಕಿ ವಿಜಯಾ ಜಿ. ಬಂಗೇರ, ಸಂಘದ ಕೋಶಾಧಿಕಾರಿ ದಯಾನಂದ ಎ., ಜೊತೆ ಕಾರ್ಯದರ್ಶಿ ಮಹೇಂದ್ರ ಕೋಟ್ಯಾನ್, ಆಡಳಿತ ಸಮಿತಿ ಸದಸ್ಯರಾದ ಎ.ಮುದ್ದಣ್ಣ ಪೂಜಾರಿ, ಸುಧಾಕರ ಎ., ರಾಜೇಂದ್ರ ಪಂದುಬೆಟ್ಟು, ಭಾಸ್ಕರ ಅಂಚನ್, ಭಾಸ್ಕರ ಕೋಟ್ಯಾನ್, ಗುರುರಾಜ್ ಪೂಜಾರಿ, ವಿನಯ್ ಕುಮಾರ್, ಜನಾರ್ಧನ ಪೂಜಾರಿ, ಚೆನ್ನಕೇಶವ, ವಿನೋದ್ ಪೂಜಾರಿ, ಭಜನಾ ಸಹ ಸಂಚಾಲಕ ಶಂಕರ ಪೂಜಾರಿ, ಅರ್ಚಕರಾದ ಅವಿನಾಶ್ ಪೂಜಾರಿ, ಜೀವನ್, ಅದಿತ್, ಮಹಿಳಾ ಘಟಕದ ಸಹ ಸಂಚಾಲಕಿಯರಾದ ದೇವಕಿ ಕೆ. ಕೋಟ್ಯಾನ್, ಜಯಂತಿ ಹರೀಶ್, ಕಾರ್ಯದರ್ಶಿ ವಾಣಿಶ್ರೀ ಅರುಣ್ ಕುಮಾರ್, ಜೊತೆ ಕಾರ್ಯದರ್ಶಿಗಳಾದ ಅಶ್ವಿನಿ ಪೂಜಾರಿ, ಲಾವಣ್ಯ, ಕೋಶಾಧಿಕಾರಿ ಸವಿತಾ ಸಂತೋಷ್, ಸಂಘಟನಾ ಕಾರ್ಯದರ್ಶಿ ಪ್ರಭಾ ದಯಾನಂದ್, ಸಹ ಸಂಘಟನಾ ಕಾರ್ಯದರ್ಶಿ ಸಂಚಲ ಶಶಿಕಾಂತ್, ಪ್ರಮುಖರಾದ ಸುರೇಶ್ ಎ., ರಮೇಶ್ ಕೋಟ್ಯಾನ್, ಕುಶಲ್ ಕುಮಾರ್ ಎ., ರವಿ ಪಾಲನ್, ಲಕ್ಷ್ಮಣ ಪೂಜಾರಿ, ಸಂಜೀವ ಪೂಜಾರಿ, ಸುಧಾಕರ ಪೂಜಾರಿ, ಪುನೀತ್ ಕುಮಾರ್, ಶಶಿಕಾಂತ್, ಸತೀಶ್, ಮಹಿಳಾ ಘಟಕದ ಸಮಿತಿ ಸದಸ್ಯರಾದ ವಿಜಯಲಕ್ಷ್ಮಿ ಶಿವಕುಮಾರ್, ವಿಜಯಲಕ್ಷ್ಮಿ ಕೃಷ್ಣ ಕೋಟ್ಯಾನ್, ಅನಿತಾ ಲಕ್ಷ್ಮಣ್ ಪೂಜಾರಿ, ಲೋಲಾಕ್ಷಿ, ಸುನೀತಾ ಶಂಕರ ಪೂಜಾರಿ, ಲಲಿತಾ ಅಚ್ಯುತ ಪೂಜಾರಿ, ಲೋಲಾಕ್ಷಿ, ರತಿ ಸುಧಾಕರ್, ಲತಾ ಆನಂದ್, ಮೋಹಿನಿ ಭಾಸ್ಕರ್, ಅಶ್ವಿನಿ ಸುನಿಲ್ ಕುಮಾರ್ ಹಾಗೂ ಶ್ರೀ ಗುರು ಕುಣಿತ ಭಜನಾ ಮಂಡಳಿಯ ಸದಸ್ಯೆಯರು, ಯುವ ಕಾರ್ಯಕರ್ತರು, ಸಂಘದ ಸದಸ್ಯರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

ಸಾರ್ವಜನಿಕ ಅನ್ನ ಸಂತರ್ಪಣೆಯಲ್ಲಿ ನೂರಾರು ಮಂದಿ ಭಕ್ತಾಭಿಮಾನಿಗಳು ಪಾಲ್ಗೊಂಡಿದ್ದರು. ಭಜನಾ ಸಪ್ತಾಹ ಮತ್ತು 65ನೇ ಭಜನಾ ಮಂಗಲೋತ್ಸವದಲ್ಲಿ ಉಡುಪಿ ತಾಲೂಕಿನ 20 ಭಜನಾ ಮಂಡಳಿಗಳಿಂದ ಭಜನೆ ಹಾಗೂ ಕುಣಿತದ ಭಜನಾ ಸೇವೆ ನಡೆಯಿತು. ಸಂಘದ ಭಜನಾ ಮಂಡಳಿ, ಮಹಿಳಾ ಘಟಕ ಮತ್ತು ಶ್ರೀ ಗುರು ಕುಣಿತ ಭಜನಾ ಮಂಡಳಿಯಿಂದ ನಗರ ಭಜನೆ ನಡೆಯಿತು.

 

Related Articles

error: Content is protected !!