Home » ಲಾರ್ಡ್ಸ್‌ನಲ್ಲಿ ಇಂದಿನಿಂದ 3ನೇ ಟೆಸ್ಟ್
 

ಲಾರ್ಡ್ಸ್‌ನಲ್ಲಿ ಇಂದಿನಿಂದ 3ನೇ ಟೆಸ್ಟ್

ಮಧ್ಯಾಹ್ನ 3.30ಕ್ಕೆ ಪ್ರಾರಂಭ

by Kundapur Xpress
Spread the love

ಲಂಡನ್ : ಲೀಡ್ಸ್‌ ಹಾಗೂ ಎಜ್‌ಬಾಸ್ಟನ್‌ನ ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿ ಆರ್ಭಟಿಸಿದ್ದ ಭಾರತ ತಂಡಕ್ಕೆ ಈಗ ನಿಜವಾದ ಅಗ್ನಿಪರೀಕ್ಷೆ ಸಮಯ. ಆರಂಭಿಕ ಎರಡು ಪಂದ್ಯಗಳಲ್ಲಿ ರನ್ ಪ್ರವಾಹವನ್ನೇ ಹರಿಸಿದ್ದ ಶುಭೌಮನ್‌ ಗಿಲ್‌ ಸಾರಥ್ಯದ ತಂಡ ಗುರುವಾರದಿಂದ ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯಲಿದ್ದು, ಲಾರ್ಡ್ಸ್ ಅಂಗಳದ ಹಸಿರು ಪಿಚ್‌ನಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬ ಕುತೂಹಲವಿದೆ.

ಹುಲ್ಲಿನಿಂದ ಕೂಡಿರುವ ಪಿಚ್‌ನಲ್ಲಿ ಬೌನ್ಸ‌ರ್ ಹಾಗೂ ವೇಗದ ಎಸೆತಗಳನ್ನು ಸಮರ್ಥವಾಗಿ ಎದುರಿಸುವ ತಂಡ ಕ್ರಿಕೆಟ್ ಕಾಶಿ ಎಂದೇ ಕರೆಸಿ ಕೊಳ್ಳುವ ಲಾರ್ಡ್ಸ್‌ ನಲ್ಲಿ ಪ್ರಾಬಲ್ಯ ಸಾಧಿಸಬಹುದು. 2 ಪಂದ್ಯಗಳಲ್ಲಿ 1-1 ಸಮಬಲ ಸಾಧಿಸಿರುವ ಉಭಯ ತಂಡಗಳು, ಲಾರ್ಡ್ಸ್‌ ನಲ್ಲಿ ಸರಣಿ ಮುನ್ನಡೆ ಪಡೆಯಲು ಕಾತರಿಸುತ್ತಿದೆ

 

Related Articles

error: Content is protected !!