ಕೋಟ : ಇಲ್ಲಿನ ಮಣೂರು ಸಂಯುಕ್ತ ಪ್ರೌಢ ಶಾಲೆಯ ಕ್ರೀಡಾಂಗಣದಲ್ಲಿ2024-25ನೇ ಸಾಲಿನ ಅಂಗನವಾಡಿ ಮಕ್ಕಳ ಕ್ರೀಡಾಕೂಟವು ಗೀತಾನಂದ ಫೌಂಡೇಶನ್ ವತಿಯಿಂದ ವೈಷ್ಣವಿ ರಕ್ಷಿತ್ ಕುಂದರ್ ಅವರ ಮಾರ್ಗದರ್ಶನದಲ್ಲಿ ಶುಕ್ರವಾರ ಜರಗಿತು. ಗೀತಾನಂದ ಫೌಂಡೇಶನ್‌ನ ಪ್ರವರ್ತಕರಾದ ಆನಂದ ಸಿ ಕುಂದರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ‘ಇಂದಿನ ಮಕ್ಕಳೇ ಭವಿಷ್ಯದ ಕ್ರೀಡಾಪಟುಗಳು , ಹಾಗಾಗಿ ಅವರಿಗೆ ಸರಕಾರಿ ವ್ಯವಸ್ಥೆಯಲ್ಲಿ ಸಹ ಉತ್ತಮ ರೀತಿಯ ಕ್ರೀಡಾ ಪ್ರೋತ್ಸಾಹ ಸಿಗಬೇಕು ಎನ್ನುವುದು ನಮ್ಮ ಆಶಯ ಈ ನಿಟ್ಟಿನಲ್ಲಿ ನಾವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಬಾಲ ಪ್ರತಿಭೆಗಳ ಕ್ರೀಡಾ ಅನಾವರಣಗೊಂಡಿದೆ ಎಂದರು. ಕಾರ್ಯಕ್ರಮದಲ್ಲಿ ಸ್ಥಳೀಯ 21 ಅಂಗನವಾಡಿಗಳು ಭಾಗವಹಿಸಿ ಪಥಸಂಚಲನ ಸೇರಿದಂತೆ ವಿವಿಧ ಕ್ರೀಡಾಚಟುವಟಿಕೆಗಳಲ್ಲಿ ಭಾಗಿಯಾಗಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ಅಂಗನವಾಡಿ ಮೇಲ್ವಿಚಾರಕರಾದ ಲಕ್ಷ್ಮೀ ನಿವೃತ್ತ ಮುಖ್ಯೋಪಾಧ್ಯಾಯರಾದ ಬಾಲಕೃಷ್ಣ ಶೆಟ್ಟಿ,ವಾಹಿನಿ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕುಂದರ್,ಮನಸ್ಮಿತಾ ಫೌಂಡೇಶನ್ ನಿರ್ದೇಶಕಿ ಸವಿತಾ ಪ್ರಕಾಶ್ ತೊಳಾರ್,ಗೀತಾನಂದ ಫೌಂಡೇಶನ್ ನಿರ್ದೇಶಕಿ ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಮಂಜುನಾಥ ಹೊಳ್ಳ ಎಸ್‌ಡಿಎಮ್‌ಸಿ ಅಧ್ಯಕ್ಷ ನಾಗರಾಜ್ ಪಡುಕರೆ ಮತ್ತು ಸದಸ್ಯರು ಹಾಗೂ ಪೋಷಕರು ಭಾಗವಹಿಸಿದ್ದರು. ಶಾಲೆಯ ಮುಖ್ಯ ಶಿಕ್ಷಕರಾದ ವಿವೇಕಾನಂದ.ವಿ.ಗಾವಂಕರ್ ಸ್ವಾಗತಿಸಿದರು. ಗೀತಾನಂದ ಸಂಸ್ಥೆಯ ಸಿಬ್ಬಂದಿಗಳಾದ ರವಿಕಿರಣ್ ಮತ್ತು ದೀಕ್ಷಿತಾ ಕಾರ್ಯಕ್ರಮವನ್ನು ಸಂಯೋಜಿಸಿದರು.