Home » ಕ್ರಿಕೆಟ್‌ನಲ್ಲಿ ಮತ್ತೆ ಪಾರುಪತ್ಯ ಮೆರೆದು ವಿಶ್ವ ಗುರುವಾದ ಭಾರತ
 

ಕ್ರಿಕೆಟ್‌ನಲ್ಲಿ ಮತ್ತೆ ಪಾರುಪತ್ಯ ಮೆರೆದು ವಿಶ್ವ ಗುರುವಾದ ಭಾರತ

by Kundapur Xpress
Spread the love

ದುಬೈ : ಕ್ರಿಕೆಟ್‌ನಲ್ಲಿ ಭಾರತ ಮತ್ತೆ ವಿಶ್ವಗುರು ಎನಿಸಿಕೊಂಡಿದೆ. ಮಿನಿ ವಿಶ್ವಕಪ್ ಖ್ಯಾತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ 3ನೇ ಬಾರಿ ಕಿರೀಟ ಗೆದ್ದು ಮೆರೆದಾಡಿದೆ. 140 ಕೋಟಿ ಭಾರತೀಯರ ನಿರೀಕ್ಷೆ, ಹಾರೈಕೆ ಹುಸಿಯಾಗದಂತೆ ನೋಡಿಕೊಂಡ ಟೀಂ ಇಂಡಿಯಾ, ಈ ಬಾರಿ ಟೂರ್ನಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್‌ ಗಳಿಂದ ಬಗ್ಗುಬಡಿಯಿತು. 2ನೇ ಬಾರಿ, ಟ್ರೋಫಿ ಗೆಲ್ಲುವ ಕಿವೀಸ್ ಕನಸು ನುಚ್ಚುನೂರಾಯಿತು

ಭಾರತಕ್ಕೆ ಟಾಸ್ ಗೆಲ್ಲುವ ಅದೃಷ್ಟ ಈ ಪಂದ್ಯದಲ್ಲೂ ಸಿಗಲಿಲ್ಲ ಟಾಸ್ ಗೆದ್ದ ಕಿವೀಸ್ ಆಯ್ಕೆ ಮಾಡಿಕೊಂಡಿದ್ದು ಬ್ಯಾಟಿಂಗ್. ಇದರಿಂದ ಭಾರತವೇನೂ ತಲೆಕೆಡಿಸಿಕೊಳ್ಳಲಿಲ್ಲ ನ್ಯೂಜಿಲೆಂಡ್ ನ್ನು 7 ವಿಕೆಟ್‌ಗೆ 251 ರನ್‌ಗಳಿಗೆ ನಿಯಂತ್ರಿಸಿತು. ದುಬೈನಲ್ಲಿ ಈಗಾಗಲೇ 3 ಸಲ ಚೇಸ್ ಮಾಡಿ ಗೆಲುವು ಒಲಿಸಿಕೊಂಡಿದ್ದ ಭಾರತ, ಫೈನಲ್‌ನಲ್ಲೂ ಎದೆಗುಂದಲಿಲ್ಲ. ರೋಹಿತ್‌ರ ಅಬ್ಬರದ ಆಟ, ಬಳಿಕ ಶ್ರೇಯಸ್, ರಾಹುಲ್ ಜವಾಬ್ದಾರಿಯುತ ಆಟದಿಂದಾಗಿ ತಂಡ 49 ಓವರ್‌ಗಳಲ್ಲಿ ಗೆದ್ದು ಚಾಂಪಿಯನ್ಸ್‌ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಡಿತು

 

Related Articles

error: Content is protected !!