192
ಬೆಂಗಳೂರು : ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಭಾರತವು ಶ್ರೀಲಂಕಾವನ್ನು ಮಣಿಸಿ ಏಷ್ಯಾ ಕಪ್‌ಗೆ ಮುತ್ತಿಟ್ಟು ವಿಜಯಭೇರಿ ಬಾರಿಸಿದೆ ಇದರೊಂದಿಗೆ ಭಾರತಕ್ಕೆ ಎಂಟನೇ ಏಷ್ಯಾ ಕಪ್ ಕಿರೀಟ ಪ್ರಾಪ್ತವಾಗಿದೆ
ಟೀಮ್ ಇಂಡಿಯಾ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 10 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ ಇದರೊಂದಿಗೆ ಎಂಟನೇ ಬಾರಿಗೆ ಭಾರತವು ಏಷ್ಯಾ ಕಪ್ ಎತ್ತಿ ಹಿಡಿದಿದೆ

ಭಾನುವಾರ ಪ್ರೇಮದಾಸ ಮೈದಾನದಲ್ಲಿ ನಡೆದ ಎಷ್ಯಾ ಕಪ್ ಫೈನಲ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಭಾರತದ ವೇಗಿ ಮೊಹಮದ್ ದಾಳಿಗೆ ತತ್ತರಿಸಿ ಕೇವಲ 15.2 ಓವರ್ ಗಳಲ್ಲಿ 50 ರನ್ ಗೆ ಸರ್ವಪತನ ಕಂಡಿತು ಭಾರತವು ಯಾವುದೇ ವಿಕೆಟ್ ನಷ್ಟವಿಲ್ಲದೆ 6.1 ಓವರ್ ಗಳಲ್ಲಿ 51 ಗುರಿ ಮುಟ್ಟಿ ಸಂಭ್ರಮಿಸಿತು

ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಕಾಯ್ದುಕೊಂಡ ಶ್ರೀಲಂಕಾ ದೊಡ್ಡ ಮೊತ್ತ ಕರೆ ಹಾಕಲು ಯೋಜನೆ ರೂಪಿಸಿತ್ತು ಆದರೆ ವೇಗಿ ಮೊಹಮ್ಮದ್ ಸಿರಾಜ್ ಲಂಕಾದ ಲೆಕ್ಕಾಚಾರವನ್ನು ಉಲ್ಟಾ ಮಾಡಿ ಅಘಾತದ ಮೇಲೆ ಆಘಾತ ನೀಡಿದರು

