118
ಹೆಡ್ಡಿಂಗ್ಲಿ : ಕೈಗೆ ಬಂದ ಕ್ಯಾಚ್‌ಗಳನ್ನು ಬಿಟ್ಟ ಭಾರತದ ಫೀಲ್ಡರ್‌ಗಳು ಕಳಪೆ ಫೀಲ್ಡಿಂಗ್‌ನೊಂದಿಗೆ ಮ್ಯಾಚ್ ಅನ್ನೂ ಬಿಟ್ಟರು. ಇದನ್ನೇ ಲಾಭವಾಗಿಸಿದ ಇಂಗ್ಲೆಂಡ್ ಲೀಡ್ಸ್ ಪಂದ್ಯವನ್ನು ಗೆದ್ದಿದೆ. ಮೊದಲ ಇನ್ನಿಂಗ್ಸ್ ನ ಕಳಪೆ ಫೀಲ್ಡಿಂಗ್ ಅನ್ನು ಮುಂದುವರಿಸಿದ ಭಾರತ ಎರಡನೇ ಇನ್ನಿಂಗ್ಸ್‌ನಲ್ಲೂ ಸುಮಾರು ಕ್ಯಾಚ್‌ಗಳನ್ನು ಬಿಟ್ಟಿತು. ಈ ಬೆನ್ನಲ್ಲೇ ಇಂಗ್ಲೆಂಡ್‌ನ ಬ್ಯಾಟಿಗರಿಗೆಲ್ಲರಿಗೂ ಜೀವದಾನ ಸಿಕ್ಕವು. ಈ ಲಾಭ ಪಡೆದ ಇಂಗ್ಲೆಂಡ್ ತಂಡದ ಬ್ಯಾಟಿಗರು ಪಂದ್ಯವನ್ನು ತಮ್ಮತ್ತ ಕಸಿದುಕೊಂಡಿದ್ದಾರೆ.
ಡಕೆಟ್ ಶತಕ, ರೂಟ್ ಅರ್ಧಶತಕ ಬಾರಿಸಿದ್ದು, ಇಂಗ್ಲೆಂಡ್ 5 ವಿಕೆಟ್‌ಗಳ ಗೆಲುವು ಸಾಧಿಸಿದೆ.

