115
ಕೋಲ್ಕತ್ತಾ : ಶನಿವಾರದ ಐಪಿಎಲ್ ಆರಂಭದ ದಿನದಂದು ಮೊದಲಿಗೆ ಬಾಲಿವುಡ್ ತಾರೆಯರು ಕುಣಿತದ ಪ್ರದರ್ಶನ ನೀಡಿದರೆ, ಬಳಿಕ ಪಂದ್ಯದಲ್ಲಿ ಸಾಲ್ಟ್ ಹಾಗೂ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಅಭಿಮಾನಿಗಳನ್ನು ಕುಣಿಯುವಂತೆ ಮಾಡಿದರು. ಇದರೊಂದಿಗೆ ಅಬ್ಬರಿಸಿದ ಆರ್ ಸಿ ಬಿ ಶುಭಾರಂಭದ ಪಂದ್ಯದಲ್ಲಿ ವಿಜಯ ಪತಾಕೆಯನ್ನು ಹಾರಿಸಿತು
ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಅಬ್ಬರಿಸಿದ ಆರ್‌ಸಿಬಿ ಆಟಗಾರರು ತಂಡಕ್ಕೆ ಶುಭಾರಂಭ ಒದಗಿಸಿದ್ದಾರೆ. ಇಲ್ಲಿನ ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 8 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು. ಈ ಬಳಿಕ ಬ್ಯಾಟಿಂಗ್ ಮಾಡಿದ ಆರ್‌ಸಿಬಿ 3 ವಿಕೆಟ್ ಕಳೆದುಕೊಂಡು 16.2 ಓವರ್ 177 ರನ್ ಗಳಿಸಿತು

