Home » ಆರ್‌ ಸಿ ಬಿ ಅಭಿಮಾನಿಗಳ ಸದ್ದಡಗಿಸಿದ ಟೈಟಾನ್ಸ್
 

ಆರ್‌ ಸಿ ಬಿ ಅಭಿಮಾನಿಗಳ ಸದ್ದಡಗಿಸಿದ ಟೈಟಾನ್ಸ್

by Kundapur Xpress
Spread the love

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆ‌ರ್.ಸಿಬಿ ಅಭಿಮಾನಿಗಳ ಸದ್ದಡಗಿಸುವುದು ಹೊಸತೇನು ಅಲ್ಲದಿದ್ದರೂ, ಅಷ್ಟು ಸುಲಭದ್ದೇನಲ್ಲ. ಈ ಸಲ ಟೂರ್ನಿಯ ಆರಂಭಿಕ 2 ಪಂದ್ಯಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಆರ್‌ಸಿಬಿಯನ್ನು ಅದರದೇ ತವರಲ್ಲಿ ಸೋಲಿಸುವ ಕಠಿಣ ಟಾಸ್ಕ್‌ನಲ್ಲಿ ಗುಜರಾತ್ ಟೈಟಾನ್ಸ್ ಯಶಸ್ವಿಯಾಗಿದೆ.

ಬುಧವಾರ ಬೆಂಗಳೂರಿನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಆರ್‌ಸಿಬಿಯನ್ನು ಶುಭ್ ಮನ್ ಗಿಲ್ ನಾಯಕತ್ವದ ಗುಜರಾತ್ 8 ವಿಕೆಟ್ ಗಳಿಂದ ಹೊಸಕಿ ಹಾಕಿತು. ಸೋಲಿನ ಆರಂಭ ಪಡೆದಿದ್ದ ಗುಜರಾತ್ ಸತತ 2ನೇ ಪಂದ್ಯದಲ್ಲಿ ಜಯಗಳಿಸಿತು.

ಚೇಸಿಂಗ್ ಸುಲಭವಾಗಬಹುದಾಗಿದ್ದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ ಕಲೆಹಾಕಿದ್ದು 169 ರನ್. ಆರಂಭಿಕ ಆಘಾತಕ್ಕೊಳಗಾದ ಹೊರತಾಗಿಯೂ ತಂಡ ಪುಟಿದೆದ್ದಿತು. ಆದರೆ ಈ ಗುರಿಯನ್ನು ರಕ್ಷಿಸಿಕೊ ಳ್ಳಲು ಆರ್‌ಸಿಬಿ ಬೌಲರ್ಸ್‌ಗೆ ಸಾಧ್ಯವಾಗಲಿಲ್ಲ. ಗುಜರಾತ್ 17.5 ಓವರ್‌ಗಳಲ್ಲೇ ಗೆಲುವು ತನ್ನದಾಗಿಸಿಕೊಂಡಿತು.

 

Related Articles

error: Content is protected !!