ಕುಂದಾಪುರ : ಭಾರತದ ತಮಿಳುನಾಡಿನಲ್ಲಿ ಜನಿಸಿದ ಕಬಡ್ಡಿ ಆಟವು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಪಂದ್ಯಾಟಗಳು ನಡೆಯತ್ತಿದ್ದು ಯಾವುದೇ ಸಲಕರಣೆಗಳಿಲ್ಲದೇ ಆಡುವ ಅಪ್ಪಟ ಭಾರತೀಯ ಕ್ರೀಡೆಯಾಗಿದೆ ಎಂದು ಕುಂದೇಶ್ವರ ದೇವಾಲಯದ ಮಾಜಿ ಆಡಳಿತ ಮೊಕ್ತೇಸರರಾದ ಕೆ ಆರ್ ಉಮೇಶ್ ರಾವ್ ರವರು ನುಡಿದರು
ಅವರು ಕುಂದಾಪುರ ನಗರದ ಸ್ಥಳೀಯ ಶ್ರೀ ಮೈಲಾರೇಶ್ವರ ಯುವಕ ಮಂಡಲದ ಆಶ್ರಯದಲ್ಲಿ ಉಡುಪಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ (ರಿ) ಇವರ ಸಹಭಾಗಿತ್ವದಲ್ಲಿ ದಿವಂಗತ ಬೇಳೂರು ಭರತ್ ಶೆಟ್ಟಿ ಹಾಗೂ ಯುವಕ ಮಂಡಲದ ಅಗಲಿದ ಸದಸ್ಯರ ಸವಿನೆನಪಿಗಾಗಿ ನಡೆದ ಹೊನಲು ಬೆಳಕಿನ ಮುಕ್ತ ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು
ಕೋಟೇಶ್ವರದ ವೀರಕೇಸರಿ ತಂಡವು ಪ್ರಥಮ ಬಹುಮಾನದ ಟ್ರೋಫಿಯೊಂದಿಗೆ 50,000 ನಗದು ಪಡೆದು ವಿಜಯಶಾಲಿಯಾಯಿತು