ತೆಕ್ಕಟ್ಟೆ : ಸೇವಾ ಸಂಗಮ ವಿದ್ಯಾ ಕೇಂದ್ರ ವಿದ್ಯಾ ಗಿರಿ ತೆಕ್ಕಟ್ಟೆ ಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ನೆರವೇರಿತು ಕ್ರೀಡಾಕೂಟವನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಸುರೇಶ್ ಬೆಟ್ಟಿನ್ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಕಾರ್ಯದರ್ಶಿಗಳಾದ ಶ್ರೀಯುತ ಕಮಲಾಕ್ಷ ಪೈ ಗಳು ಧ್ವಜಾರೋಹಣ ನೆರವೇರಿಸಿದರು. ಕೋಶಾಧಿಕಾರಿಗಳಾದ ಶ್ರೀ ಸುಹಾಸ್ ಪೈರವರು ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು.
ಮಕ್ಕಳಿಗೂ ಹಾಗೂ ತಂದೆ ತಾಯಿಯಂದಿರಿಗೂ ಸ್ಪರ್ಧೆಗಳನ್ನು ನಡೆಸಲಾಗಿತ್ತು. ಮಕ್ಕಳೊಂದಿಗೆ ತಂದೆ ತಾಯಿಯವರು ಕ್ರೀಡೆಯಲ್ಲಿ ಸ್ಪರ್ಧಿಸಿ ಕ್ರೀಡಾಕೂಟಕ್ಕೆ ಮೆರೆಗು ತಂದರು ಸಂಜೆಯ ಸಮಾರೋಪ ಸಮಾರಂಭವು ಗೌರವ ಅಧ್ಯಕ್ಷರಾದ ಶ್ರೀಯುತ ಸಂಜೀವರವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಆಡಳಿತ ಮಂಡಳಿಯ ಹಿಂದಿನ ಸಂಚಾಲಕರಾದ ಬಿಲೇನಿಯರ್ ರೈತ ಪ್ರಶಸ್ತಿ ವಿಜೇತರಾದ ಶ್ರೀಯುತ ರಮೇಶ್ ನಾಯಕ್ ತೆಕ್ಕಟ್ಟೆ ಮತ್ತು ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಅರುಣ್ ಕುಮಾರ್ ಶೆಟ್ಟಿ ಅವರು ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಬಹುಮಾನಿತ ವಿದ್ಯಾರ್ಥಿಗಳಿಗೆ ಪದಕವನ್ನು ನೀಡಿ ಗೌರವಿಸಲಾಯಿತು.
ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳಿಗೂ, ಸದಸ್ಯರು, ಹಿರಿಯ ವಿದ್ಯಾರ್ಥಿಗಳಿಗೂ, ಪೋಷಕರು ಎಲ್ಲಾ ಅಧ್ಯಾಪಕವಂದದವರು, ಬೋದಕೇತರ ಸಿಬ್ಬಂದಿಗಳು ಕ್ರೀಡಾಕೂಟದಲ್ಲಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಸಂತೋಷ್ ಖಾರ್ವಿ ರವರು ಕ್ರೀಡಾಕೂಟವನ್ನು ಸಂಘಟಿಸಿದರು ಮುಖ್ಯ ಶಿಕ್ಷಕ ಶ್ರೀ.ಟಿ.ವಿಷ್ಣುಮೂರ್ತಿ ಭಟ್ ಸ್ವಾಗತಿಸಿ, ಶ್ರೀಮತಿ ಶಕೀಲಾ ನಿರೂಪಿಸಿ, ಶಕೀಲಾ. ಎಚ್ ಧನ್ಯವಾದ ಅರ್ಪಿಸಿದರು

