Home » ಇಂದಿನಿಂದ ಮಹಿಳಾ ಐಪಿಎಲ್
 

ಇಂದಿನಿಂದ ಮಹಿಳಾ ಐಪಿಎಲ್

3ನೇ ಆವೃತ್ತಿ ಪ್ರಾರಂಭ

by Kundapur Xpress
Spread the love

ವಡೋದರ : 3ನೇ ಆವೃತ್ತಿಯ ಮಹಿಳಾ ಪ್ರೀಮಿಯರ್  ಲೀಗ್ (ಡಬ್ಲ್ಯುಪಿಎಲ್)ಗೆ ಶುಕ್ರವಾರ ಚಾಲನೆ ಮೊರೆಯಲಿದೆ. ಈ ಬಾರಿಯೂ 5ತಂಡಗಳು ಕಣದಲ್ಲಿದ್ದು ವಡೋದರ, ಬೆಂಗಳೂರು, ಮುಂಬೈ ಹಾಗೂ ಲಕ್ನೋ ನಗರಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.

ಲೀಗ್ ಹಂತದಲ್ಲಿ ಪ್ರತಿ ತಂಡಗಳು ಉಳಿದ ನಾಲ್ಕು ತಂಡಗಳ ವಿರುದ್ಧ ತಲಾ 2 ಬಾರಿ ಆಡಲಿದ್ದು, ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್‌ಗೇರಲಿದೆ. 2 ಹಾಗೂ 3ನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್ ಪಂದ್ಯವನ್ನಾಡಲಿದ್ದು ಗೆಲ್ಲುವ ತಂಡ ಫೈನಲ್ ಪ್ರವೇಶಿಸಿ ಟ್ರೋಫಿಗೆ ಸೆಣಸಲಿದೆ.

ಹಾಲಿ ಚಾಂಪಿಯನ್ ಆರ್‌ಸಿಬಿ ತಂಡವನ್ನು ಈ ಸಲವೂ ಭಾರತದ ಉಪನಾಯಕಿ ಸ್ಕೃತಿ ಮಂಧನಾ ಮುನ್ನಡೆಸಿದರೆ, ಮೊದಲ ಆವೃತ್ತಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಭಾರತದ ನಾಯಕಿ ಹರ್ಮನ್‌ ಪ್ರೀತ್ ಕೌರ್‌ರ ಸಾರಥ್ಯವಿದೆ. ಡೆಲ್ಲಿ ಕ್ಯಾಪಿಟಲ್ಸ್‌ನ ಆಸ್ಟ್ರೇಲಿಯಾದ ದಿಗ್ಗಜೆ ಮೆಗ್ ಲ್ಯಾನಿಂಗ್ ನಾಯಕಿಯಾಗಿದ್ದು, ಯುಪಿ ವಾರಿಯರ್ಸ್ ತಂಡವನ್ನು ಭಾರತದ ತಾರಾ ಆಂಡರ್ ದೀಪ್ತಿ ಶರ್ಮಾ ಮುನ್ನಡೆಸಲಿದ್ದಾರೆ. ಗುಜರಾತ್ ಜೈಂಟ್ಸ್ ಈ ಬಾರಿ ಆಸ್ಟ್ರೇಲಿಯಾದ ಅನುಭವಿ ಆಂಡರ್ ಅಲ್ಲೆ ಗಾರ್ಡರ್ ನೇತೃತ್ವದಲ್ಲಿ ಆಡಲಿದೆ.

ಫೆ.14ರಿಂದ 19ರ ವರೆಗೂ ವಡೋದರದ ಬಿಸಿಎ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದ್ದು ಫೆ.21ರಿಂದ ಮಾ.1ರ ವರೆಗಿನ ಪಂದ್ಯಗಳಿಗೆ ಬೆಂಗಳೂರಿನ ಚಿನ್ನಸ್ವಾಮಿ‌ ಕ್ರೀಡಾಂಗಣ ಆಥಿತ್ಯ ವಹಿಸಲಿದೆ

 

Related Articles

error: Content is protected !!