92
ಬೆಂಗಳೂರು : 18 ಬಿಜೆಪಿ ಸದಸ್ಯರ ಅಮಾನತು ಕುರಿತು ಸಭಾಧ್ಯಕ್ಷರು ಕೈಗೊಂಡ ನಿರ್ಣಯ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಪಾಲಿಗೆ ಶಾಶ್ವತ ಕಪ್ಪು ಚುಕ್ಕೆ. ಇದು ಕರಾಳ ನಿರ್ಣಯ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಆರೋಪಿಸಿದ್ದಾರೆ. ಸಭಾಧ್ಯಕ್ಷ ಯು.ಟಿ.ಖಾದರ್‌ಗೆ ಪತ್ರ ಬರೆದಿರುವ ಅವರು, ಶಾಸಕರ ಸಹಜ ಆಕ್ರೋಶವನ್ನು ಅಶಿಸ್ತು ಎಂದು ಪರಿಗಣಿಸಿ 18 ಶಾಸಕರನ್ನು ಆರು ತಿಂಗಳ ಕಾಲ ಅಮಾನತುಗೊಳಿಸಿರುವುದು ಶಾಸನಸಭೆಯ ಕರಾಳ ನಿರ್ಣಯ.
ಈಗಾಲಾದರೂ ತಮ್ಮ ನಿರ್ಣಯ ವಾಪಸ್ ತೆಗೆದುಕೊಳ್ಳಬೇಕು. ಶಾಸಕರ ಆಕ್ರೋಶ ತಣಿಸುವ ಬದಲು ಅವರ ಅಧಿಕಾರ ಮೊಟಕು ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ. ಅಮಾನತು ಆದೇಶ ಪ್ರಕಟಿಸುವ ಮುನ್ನ ಬಿಜೆಪಿ-ಜೆಡಿಎಸ್ ಸದಸ್ಯರ ಜತೆ ಸಮಾಧಾನ ಸಭೆ ನಡೆಸದೆ ಸಿಎಂ ಮತ್ತು ಕಾನೂನು ಸಚಿವರ ಜತೆ ರಹಸ್ಯ ಸಭೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

