149
ಹನೂರು : ಮಲೆ ಮಹದೇಶ್ವರ ವನ್ಯಜೀವಿ ಧಾಮದ ಮೀಣ್ಯಂನಲ್ಲಿ ಐದು ಹುಲಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ವಿಷ ಪ್ರಾಶನದಿಂದ ಹುಲಿಗಳು `ಮೃತಪಟ್ಟಿದ್ದು ಖಚಿತವಾದ ಬೆನ್ನಲ್ಲೇ, ವಿಷ ಹಾಕಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಹುಲಿ ಹಸುವನ್ನು ಕೊಂದಿದ್ದಕ್ಕೆ ಕೋಪಗೊಂಡು, ಹಸುವಿನ ಮಾಲೀಕ ಕೋನಪ್ಪ ಈ ಕೃತ್ಯವೆಸಗಿದ ರೂವಾರಿ. ಈತನ ಕುಮ್ಮಕ್ಕಿನಿಂದ ಮಾದುರಾಜು, ನಾಗರಾಜು ಕೀಟನಾಶಕವನ್ನು ಹಸುವಿನ ದೇಹಕ್ಕೆ ಸಿಂಪಡಿಸಿದ್ದರು. ಈ ಮೂವರನ್ನೂ ಈಗ ಬಂಧಿಸಲಾಗಿದೆ.
ಇವರ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್ 9.27ರ ಮತ್ತು ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 24ರ ಉಲ್ಲಂಘನೆಯಡಿ ‘ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಧೀಶರು ಅವರನ್ನು ಜೂ.30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಸೂಚಿಸಿದ್ದಾರೆ.ವಿಚಿತ್ರ ವೆಂದರೆ ಈ ಹುಲಿಗಳು ಸತ್ತ ದಿನ ಈ ಮೂವರು ಮುಗ್ಧರ ರೀತಿ ವರ್ತಿಸಿದ್ದರು. ನಂತರ ಕೃತ್ಯ ಎಸಗಿದ್ದಾಗಿ ಒಪ್ಪಿದ್ದಾರೆ

