Home » ಇಂಡಿಗೋ ವಿಮಾನಕ್ಕೆ ಡಿಕ್ಕಿ ಹೊಡೆದ ಟಿಟಿ
 

ಇಂಡಿಗೋ ವಿಮಾನಕ್ಕೆ ಡಿಕ್ಕಿ ಹೊಡೆದ ಟಿಟಿ

by Kundapur Xpress
Spread the love

ಬೆಂಗಳೂರು : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಕೆಟ್ಟು ನಿಂತಿದ್ದ ವಿಮಾನಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಪಾರ್ಕಿಂಗ್‌ ಬೇ -71 ಅಲ್ಫಾ ಬಳಿ ಮಧ್ಯಾಹ್ನ 12:15ರ ಸುಮಾರಿಗೆ ಈ ಘಟನೆ ಸಂಭವಿಸಿದೆ

ಎಂಜಿನ್ ಸಮಸ್ಯೆಯಿಂದಾಗಿ ಇಂಡಿಗೋ ಅ-320 ವಿಮಾನವನ್ನು ಅಲ್ಲಿ ನಿಲ್ಲಿಸಲಾಗಿತ್ತು. ಗೌಂಡ್ ಹ್ಯಾಂಡ್ಲಿಂಗ್ ಕಂಪನಿಯಾದ ಗ್ಲೋಬ್ ಗೌಂಡ್ ಇಂಡಿಯಾದಿಂದ ನಿಯೋಜಿಸಲ್ಪಟ್ಟ ಟೆಂಪೋ ಟ್ರಾವೆಲರ್‌ನ ಚಾಲಕ ನಿದ್ರೆ ಮಂಪರಿನಲ್ಲಿದ್ದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಡಿಕ್ಕಿಯಿಂದ ಟಿಟಿಯ ಮೇಲ್ಬಾಗ ಹಾನಿಯಾಗಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾನೆ.

 

Related Articles

error: Content is protected !!