Home » 6ನೇ ಗುಂಡಿಯಲ್ಲಿ 12 ಮೂಳೆಗಳು ಪತ್ತೆ
 

6ನೇ ಗುಂಡಿಯಲ್ಲಿ 12 ಮೂಳೆಗಳು ಪತ್ತೆ

by Kundapur Xpress
Spread the love

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಅನಧಿಕೃತವಾಗಿ ನೂರಾರು ಶವ ಹೂಳಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗ್ರಾಮದ ನೇತ್ರಾವತಿ ಸ್ನಾನಘಟ್ಟ ಪರಿಸರದಲ್ಲಿ ಮಂಗಳವಾರದಿಂದ ನಡೆಯುತ್ತಿರುವ ಉತ್ಖನನ ಕಾರಾಚರಣೆಗೆ ಗುರುವಾರ ಯಶಸ್ಸು ಲಭಿಸಿದೆ. ಉತ್ಪನೆನದ ವೇಳೆ 6ನೇ ಗುಂಡಿಯಲ್ಲಿ ಮಾನವನ ಒಟ್ಟು 12 ಮೂಳೆಗಳು ಪತ್ತೆಯಾಗಿವೆ. ಅವುಗಳನ್ನು ಹೆಚ್ಚಿನ ತನಿಖೆಗಾಗಿ ಸಂಗ್ರಹಿಸಿ ಇಡಲಾಗಿದೆ.

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಹೆಣ ಹೂತಿರುವುದಾಗಿ ಅನಾಮಿಕ ವ್ಯಕ್ತಿ ದೂರು ನೀಡಿರುವ ಹಿನ್ನೆಲೆಯಲ್ಲಿ ಮೂರನೇ ದಿನದ ಉತ್ಪನನ ಕಾರ್ಯಾಚರಣೆ ಗುರುವಾರ ನೇತ್ರಾವತಿ ದಡದಲ್ಲಿ ನಡೆಯಿತು. ಬೆಳಗ್ಗೆ 11.00 ಗಂಟೆಯ ವೇಳೆಗೆ ನೇತ್ರಾವತಿ ಸೇತುವೆ ಕಡೆಯಿಂದ ತೆರಳಿದ ಹಿಟಾಚಿ, ಆರನೇ ಪಾಯಿಂಟ್‌ನಲ್ಲಿ ಅಗೆತ ಪ್ರಾರಂಭಿಸಿತು ಆಗ ಮಾನವನ ಒಟ್ಟು 12 ಮೂಳೆಗಳು ಪತ್ತೆಯಾಗಿವೆ

 

Related Articles

error: Content is protected !!