ಬೆಂಗಳೂರು : ಮುಡಾ ಹಗರಣದ ಸಂಬಂಧ ರಾಜ್ಯಪಾಲರು ಸಿಎಂ ವಿರುದ್ದ ಪ್ರಾಸಿಕ್ಯೂಷನ್‌ಗೆ ಆದೇಶ ನೀಡಿರುವ ಹಿನ್ನೆಲೆ ಭಾನುವಾರ ಹಾಗೂ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಪ್ರವಾಸಗಳನ್ನೆಲ್ಲಾ ಸಿದ್ದರಾಮಯ್ಯ ರದ್ದು ಮಾಡಿ, ಮುಡಾ ಕುಣಿಕೆಯಿಂದ ಪಾರಾಗಲು ಸರ್ವಪ್ರಯತ್ನ ನಡೆಸಿದ್ದಾರೆ. ಆ.23ಕ್ಕೆ ಹೊಸದಿಲ್ಲಿಗೂ ತೆರಳಿ ಅಲ್ಲಿ ಹೈಕಮಾಂಡ್‌ಗೆ ವಸ್ತುಸ್ಥಿತಿಯ ಬಗ್ಗೆ ವರದಿ ನೀಡಲು ಸಿದ್ಧತೆ ನಡೆಸಿದ್ದಾರೆ. ಅಲ್ಲದೇ ಸೋಮವಾರವೇ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದಾರೆ.
ಮತ್ತೊಂದೆಡೆ ಸಿದ್ದರಾಮಯ್ಯರ ಸಂಕಟ ಇಡೀ ಪಕ್ಷಕ್ಕೆ ಬಂದಿರುವ ಸಂಕಷ್ಟ ಎಂದೇ ಭಾವಿಸಿರುವ ಕಾಂಗ್ರೆಸ್ ಶಾಸಕರು ಸಚಿವರ ದಂಡೇ ಭಾನುವಾರ ಸಿದ್ದರಾಮಯ್ಯ ಮನೆಗೆ ಆಗಮಿಸಿತ್ತು. ರಾಜ್ಯಪಾಲರ ಆದೇಶದ ವಿರುದ್ಧ ಕಾನೂನು ಸಮರ ಸಾರಿರುವ ಸಿಎಂ ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿಗಳಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಫ್ಟಿ ಅವರ ಜೊತೆ ಭಾನುವಾರ ಸುದೀರ್ಘ ಚರ್ಚೆ ನಡೆಸಿದ್ದಾರೆ. ರಾಜ್ಯಪಾಲರು ನೀಡಿರುವ ಆದೇಶಕ್ಕೆ ತಡೆ ಕೋರಿ ಸಿಎಂ ಸೋಮವಾರ ಹೈಕೋಟ್೯ಗೆ ರಿಟ್ ಅರ್ಜಿ ಸಲ್ಲಿಸಲಿದ್ದಾರೆ