Home » ಯಲ್ಲಮ್ಮನ ಗುಡ್ಡದಲ್ಲಿ ವಾಣಿಜ್ಯ ಸಂಕೀರ್ಣ ಉದ್ಘಾಟನೆ
 

ಯಲ್ಲಮ್ಮನ ಗುಡ್ಡದಲ್ಲಿ ವಾಣಿಜ್ಯ ಸಂಕೀರ್ಣ ಉದ್ಘಾಟನೆ

by Kundapur Xpress
Spread the love

ಬೆಳಗಾವಿ : ಬಿಜೆಪಿಯವರು ಧರ್ಮ, ಆಚಾರ-ವಿಚಾರ ಕುರಿತು ಮಾತನಾಡುತ್ತಾರೆ. ಜನರ ದಾರಿತಪ್ಪಿಸುತ್ತಾರೆ ಅಷ್ಟೆ. ಆದರೆ ಹಿಂದೂ ದೇಗುಲಗಳ ಅಭಿವೃದ್ಧಿಗಾಗಿ ನಾವು ಜಾರಿಗೆ ತಂದಷ್ಟು ಯೋಜನೆಗಳನ್ನು ಬಿಜೆಪಿಯವರು ತಂದಿಲ್ಲ ಎಂದು ಮುಖ್ಯಮಂತ್ರಿ .ಸಿದ್ದರಾಮಯ್ಯ ಟಾಂಗ್ ನೀಡಿದರು.

ಸವದತ್ತಿ ರೇಣುಕಾ ಯಲ್ಲಮ್ಮನ ಗುಡ್ಡದಲ್ಲಿ ಭಾನುವಾರ ಮಹಿಳಾ ಅಭಿವೃದ್ಧಿ ನಿಗಮದಿಂದ ನಿರ್ಮಿಸಲಾಗಿರುವ ವಾಣಿಜ್ಯ ಸಂಕೀರ್ಣವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ದೇವರು, ಧರ್ಮ ತಮಗೆ ಮಾತ್ರ ಸೇರಿದ್ದು ಎಂದು ಬಿಜೆಪಿಯವರು ಭಯ ಹುಟ್ಟಿಸುವಂತೆ ಮಾತನಾಡುತ್ತಾರೆ. ಆದರೆ ಈವರೆಗೂ ಸವದತ್ತಿ ಯಲ್ಲಮ್ಮ ದೇವಿಯ ಭಕ್ತರಿಗೆ ನಾವು ಮಾಡಿದಂಥ ಕಾರ್ಯಕ್ರಮವನ್ನು ಬಿಜೆಪಿಯವರು ಈವರೆಗೆ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು. 

   

Related Articles

error: Content is protected !!