102
ಬೆಳ್ತಂಗಡಿ : ತಾನು ಮಾಡಿದ್ದೆಲ್ಲವೂ ಅಪಚಾರವಾಗಿದೆ. ನನ್ನನ್ನು ಪುಸಲಾಯಿಸಿ ಧರ್ಮಸ್ಥಳದ ವಿರುದ್ಧ ಎತ್ತಿಕಟ್ಟಿದ್ದಾರೆ ಎಂದು ವಿಶೇಷ ತನಿಖಾ ತಂಡದ ಹಾಗೂ ಕೋರ್ಟ್ ಎದುರು ಮುಸುಕುಧಾರಿ ಚಿನ್ನಯ್ಯ ತಪ್ರೊಪ್ಪಿಕೊಂಡಿದ್ದಾನೆ.
ಕಳೆದ ಜು.3ರಂದು ದೂರು ನೀಡುವ ಮೂಲಕ ಪ್ರಾರಂಭವಾದ ಚಿನ್ನಯ್ಯನ ನಾಟಕ ಇದೀಗ ಆತ ಆರೋಪಿಯಾಗಿ ಪರಿವರ್ತನೆ ಹೊಂದಿ ಅಗಸ್ಟ್ 23 ರಿಂದ ಎಸ್ ಐ ಟಿ ವಿಚಾರಣೆ ಎದುರಿಸುತ್ತಿದ್ದಾನೆ. ತನಿಖಾಧಿಕಾರಿಗಳ ವಿಚಾರಣೆಯಿಂದಾಗಿ ಹಲವು ಸ್ಫೋಟಕ ವಿಚಾರಗಳು ಬಯಲಾಗಿದ್ದು ಒಟ್ಟು ಪ್ರಕರಣದ ಬೇರೊಂದು ಮಗ್ಗುಲಿಗೆ ಹೊರಳುತ್ತಿರುವ ಸೂಚನೆ ದೊರಕಿದೆ.
ನ್ಯಾಯಾಧೀಶರಿಗೆ ಸತ್ಯದ ಸಂಪೂರ್ಣ ದರ್ಶನ ಮಾಡಿಸಿದ್ದಾನೆ. ಚಿನ್ನಯ್ಯನ ತೀವ್ರ ವಿಚಾರಣೆಯಿಂದಾಗಿ ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ತನಿಖೆ ಮಂಡ್ಯ ಹಾಗೂ ತಮಿಳುನಾಡಿಗೂ ವಿಸ್ತರಿಸಿದೆ.
ತಮಿಳುನಾಡಿನ ಚಿಕ್ಕರಸಿ ಪಾಳ್ಯಕ್ಕೆ ಅಧಿಕಾರಿಗಳು ತೆರಳಿ ಕುಟುಂಬಸ್ಥರಿಂದ ಮಹತ್ವದ ಮಾಹಿತಿ ಸಂಗ್ರಹಿಸಿದ ಎಸ್‌ಐಟಿ ದೂರುದಾರನ ಹುಟ್ಟೂರಿನಲ್ಲಿ ತನಿಖೆ ನಡೆಸುತ್ತಿದೆ

