Home » ಆರೆಸ್ಸೆಸ್‌ ಮಾನನಷ್ಟ : ಸಿದ್ದರಾಮಯ್ಯಗೆ ನೋಟಿಸ್
 

ಆರೆಸ್ಸೆಸ್‌ ಮಾನನಷ್ಟ : ಸಿದ್ದರಾಮಯ್ಯಗೆ ನೋಟಿಸ್

by Kundapur Xpress
Spread the love

ಬೆಂಗಳೂರು : ರಾಜ್ಯದಲ್ಲಿ ಅತಿಹೆಚ್ಚು ಅಪರಾಧ ಕೃತ್ಯಗಳನ್ನು ನಡೆಸುತ್ತಿರುವುದು ಆರೆಸ್ಸೆಸ್‌ ಸಂಘಟನೆ ಮತ್ತು ಬಜರಂಗದಳ ದವರು ಎಂಬ ವಿವಾದಾತ್ಮಕ ಹೇಳಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (42ನೇ ಎಸಿ ಜೆಎಂ ಕೋರ್ಟ್) ನೋಟಿಸ್ ಜಾರಿಗೊಳಿಸಿದೆ. 

ಆರೆಸ್ಸೆಸ್‌ ಬಗ್ಗೆ  ಅವಹೇಳನಕಾರಿ ಹೇಳಿಕೆ ನೀಡುವ ಮುಖಾಂತರ ಆ‌ರ್ ಎಸ್‌ ಎಸ್ ಸಂಘಟನೆ ಗೌರವಕ್ಕೆ ಧಕ್ಕೆ ತಂದು ಮಾನನಷ್ಟ ಉಂಟು ಮಾಡಿದ ಆರೋಪದ ಮೇಲೆ ಬುಧವಾರ ಆರ್ ಎಸ್‌ ಎಸ್ ಕಾರ್ಯಕರ್ತ ಹಾಗೂ ವಕೀಲ ಎನ್.ಕಿರಣ್ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜೂ.26ಕ್ಕೆ ಮುಂದೂಡಿತು

 

Related Articles

error: Content is protected !!