Home » ಡೆವಿಲ್ ಶೂಟಿಂಗ್‌ಗಾಗಿ ಥಾಯ್ಲೆಂಡ್‌ಗೆ ಹೋಗಲು ದರ್ಶನ್‌ಗೆ ಕೋರ್ಟ್ ಅಸ್ತು
 

ಡೆವಿಲ್ ಶೂಟಿಂಗ್‌ಗಾಗಿ ಥಾಯ್ಲೆಂಡ್‌ಗೆ ಹೋಗಲು ದರ್ಶನ್‌ಗೆ ಕೋರ್ಟ್ ಅಸ್ತು

ಜು.11ರಿಂದ 30ರವರೆಗೆ ವಿದೇಶ ಪ್ರವಾಸಕ್ಕೆ ಅನುಮತಿ

by Kundapur Xpress
Spread the love

ಬೆಂಗಳೂರು : ಡೆವಿಲ್’ ಚಿತ್ರದ ಚಿತ್ರೀಕರಣಕ್ಕಾಗಿ ಜು.11ರಿಂದ 30ರವರೆಗೆ ಥಾಯ್ಲೆಂಡ್ ಗೆ ಹೋಗಲು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 2ನೇ ಆರೋಪಿ ನಟ ದರ್ಶನ್‌ ಗೆ ಅನುಮತಿ ನೀಡಿ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಮಂಗಳವಾರ ಆದೇಶಿಸಿದೆ. ಥಾಯ್ಲೆಂಡ್‌ಗೆ ತೆರಲು ಅನುಮತಿ ನೀಡುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಾಲಯ ಈ ಆದೇಶ ಮಾಡಿದೆ.

ಡೆವಿಲ್ ಚಿತ್ರದ ಚಿತ್ರೀಕರಣಕ್ಕಾಗಿ ದರ್ಶನ್ ಜು.11ರಿಂದ 30ರವರೆಗೆ ಥಾಯ್ಲೆಂಡ್‌ಗೆ ಹೋಗಬಹುದು. ವಿದೇಶದಿಂದ ಭಾರತಕ್ಕೆ ಹಿಂದಿರುಗಿದ ನಂತರ, ಯಾವ ದೇಶಕ್ಕೆ ಯಾವಾಗ ಹೋಗಲಾಯಿತು ? ಯಾವಾಗ ಭಾರತಕ್ಕೆ ವಾಪಸ್ ಬರಲಾಯಿತು ? ಎಷ್ಟು ದಿನ ವಿದೇಶದಲ್ಲಿ ಇರಲಾಯಿತು ? ಅಲ್ಲಿ ನಡೆಸಲಾದ ಕಾರ್ಯ ಚಟುವಟಿಕೆಗಳೇನು ? ಎಂಬ ಬಗ್ಗೆ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಬೇಕು ಎಂದು ನ್ಯಾಯಾಲಯ ಇದೇ ವೇಳೆ ಷರತ್ತು ವಿಧಿಸಿದೆ.

 

Related Articles

error: Content is protected !!