Home » ಕೈ ಬಿಟ್ಟು ಹೋದವರಿಗೆ ಬಿಜೆಪಿಯಲ್ಲಿ ಲೆಕ್ಕಕ್ಕಿಲ್ಲ : ಡಿಕೆಶಿ
 

ಕೈ ಬಿಟ್ಟು ಹೋದವರಿಗೆ ಬಿಜೆಪಿಯಲ್ಲಿ ಲೆಕ್ಕಕ್ಕಿಲ್ಲ : ಡಿಕೆಶಿ

by Kundapur Xpress
Spread the love

ಶಿವಮೊಗ್ಗ : ಕಾಂಗ್ರೆಸ್  ಬಿಟ್ಟು ಬಿಜೆಪಿಗೆ ಹೋದವರಿಗೆ ಬಿಜೆಪಿಯಲ್ಲಿ ಯಾವ ಸ್ಥಾನಮಾನವೂ ಇಲ್ಲ ಯೂಸ್ ಆ್ಯಂಡ್ ಥ್ರೋವಾಗಿ ಬಳಸುತ್ತಿದ್ದಾರೆ  ಎಂದು ಡಿ ಕೆ ಶಿವಕುಮಾ‌ರ್ ಹೇಳಿದರು.

ಅವರು ಶಿವಮೊಗ್ಗದಲ್ಲಿ ಮಾತನಾಡಿ, ನಾವು ಬೇರೆ ಪಕ್ಷದ ಒಳ ಜಗಳ ಇಟ್ಟುಕೊಂಡು ರಾಜಕಾರಣ ಮಾಡುತ್ತಿಲ್ಲ. ಅವರದು ಇದ್ದದ್ದೆ ಜನ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವ ಕೆಲಸ ಕೊಟ್ಟಿದ್ದಾರೆ. ಅಧಿಕಾರ ಕೊಟ್ಟಾಗ ಆಡಳಿತ ನಡೆಸುವ ಅನುಭವ ಇರಲಿಲ್ಲ. ಕಾಂಗ್ರೆಸ್‌ನಿಂದ ಹೋದವರಿಗೆ ಅಲ್ಲಿ ಸ್ಥಾನವಿಲ್ಲ.ಯೂಸ್ ಆ್ಯಂಡ್ ಥ್ರೋ ಮಾಡಿದ್ದಾರೆ. ಈಗ ಎಲ್ಲರಿಗೂ ಗೊತ್ತಾಗುತ್ತಿದೆ ಎಂದರು.

ಯೂಸ್ ಆ್ಯಂಡ್ ಥ್ರೋ ಮಾಡಿದವರ ಹೆಸರು ನಾವು ಹೇಳಲು ಹೋಗಲ್ಲ. ಒಬ್ಬೊಬ್ಬರು ಒಂದೊಂದು ಸಿದ್ಧಾಂತದಲ್ಲಿ ಬೆಳೆದಿರುತ್ತಾರೆ ಅಂತವರು ಬೇರೆಡೆ ಹೋದಾಗ ಅಲ್ಲಿ ಒಗ್ಗುವುದಿಲ್ಲ. ಅವರ ಪಕ್ಷದಲ್ಲಿ ಏನಾದರೂ ಮಾಡಿಕೊಳ್ಳಲಿ ನಮಗೆ ಅದರಲ್ಲಿ ಮಧ್ಯ ಪ್ರವೇಶಿಸಲು ಇಷ್ಟವಿಲ್ಲ. ಅದರ ಲಾಭ ಪಡೆಯುವ ಉದ್ದೇಶವೂ ನಮಗಿಲ್ಲ ಎಂದು ಹೇಳಿದರು.

 

Related Articles

error: Content is protected !!