115
ಬೆಂಗಳೂರು : ಕುರ್ಚಿ ಸಿಗುವುದೇ ಕಷ್ಟ. ಸಿಕ್ಕಾಗ ತೆಪ್ಪಗೆ ಬಂದು ಕುಳಿತುಕೊಳ್ಳಬೇಕೆಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಟಾಕಿ ಹಾರಿಸಿದ ಪ್ರಸಂಗ ಶುಕ್ರವಾರ ಬೆಂಗಳೂರಿನಲ್ಲಿ ವಕೀಲರ ಸಂಘದಿಂದ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ನಡೆಯಿತು.
ವಕೀಲರ ಸಂಘದಿಂದ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಉದ್ಘಾಟಿಸಿ ಶಿವಕುಮಾರ್ ಮಾತನಾಡುತ್ತಿದ್ದ ವೇಳೆ, ಸಭಾಂಗಣದ ಇಕ್ಕೆಲಗಳಲ್ಲಿ ವಕೀಲರು ನಿಂತಿದ್ದರು. ಆಗ ವಕೀಲರನ್ನು ಉದ್ದೇಶಿಸಿ ಇಷ್ಟೊಂದು ಕುರ್ಚಿಗಳಿವೆ ಬನ್ನಿ ಕುಳಿತುಕೊಳ್ಳಿ. ಕುರ್ಚಿ ಸಿಗುವುದೇ ಕಷ್ಟ. ಕುರ್ಚಿ ಸಿಕ್ಕಾಗ ತೆಪ್ಪಗೆ ಬಂದು ಕುಳಿತುಕೊಳ್ಳಬೇಕು. ನಿಮ್ಮನ್ನು ನೋಡಿದರೆ ತ್ಯಾಗಿಗಳ ತರಹ ಕಾಣುತ್ತಾ ಇದ್ದೀರಿ ಎಂದು ಚಟಾಕಿ ಹಾರಿಸಿದ್ದು, ಇತ್ತೀಚಿಗಿನ ರಾಜಕೀಯ ಬೆಳವಣಿಗೆಗಳ ಕುರಿತ ಮಾರ್ಮಿಕ ಹೇಳಿಕೆಯಂತಿತ್ತು.

