ಹೈದರಾಬಾದ್ : ಈನಾಡು ಹಾಗೂ ಈಟೀವಿ ಸಂಸ್ಥೆಗಳ ಮೂಲಕತೆಲುಗು ಮಾಧ್ಯಮ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ರಾಮೋಜಿ ಫಿಲ್ಡ್ ಸಿಟಿಯ ನಿರ್ಮಾತೃ ರಾಮೋಜಿ ರಾವ್ (88ವರ್ಷ) ಶನಿವಾರ ಮುಂಜಾನೆ ನಿಧನರಾದರು. ಇದರೊಂದಿಗೆ ತೆಲುಗು ಮಾಧ್ಯಮದ ದೊಡ್ಡ ಕೊಂಡಿಯೊಂದು ಕಳಚಿದಂತಾಗಿದೆ.
ರಾಮೋಜಿ ಅವರಿಗೆ ಉಸಿ ರಾಟ ತೊಂದರೆ ಕಾಣಿಸಿ ಕೊಂಡ ಹಿನ್ನೆಲೆಯಲ್ಲಿ ಜೂ.5 ‘ರಂದು ನಗರದ ಖಾಸಗಿ ಆಸ್ಪತ್ರೆ ಗೆ ದಾಖಲಿಸಲಾಗಿತ್ತು. ಆದರೆ ಅವರು ಶನಿವಾರ ಮುಂಜಾನೆ 4:50ಕ್ಕೆ ನಿಧನ ರಾಗಿದ್ದಾರೆ ಎಂದು ಆಸ್ಪತ್ರೆ ಪ್ರಕಟಿಸಿದೆ. ಹಾಗಾಗಿ ಅವರ ಪಾರ್ಥಿವ ಶರೀರವನ್ನು ರಾಮೋಜಿ ಫಿಲ್ಡ್ ಸಿಟಿಯಲ್ಲಿ ರುವ ಅವರ ಮನೆಗೆ ಕೊಂಡೊಯ್ದು ಅಂತಿಮ ದರ್ಶನಕ್ಕೆ ಇಡಲಾಗಿದೆ.