Home » ಮುಡಾ ಅಕ್ರಮ : ನ್ಯಾಯಾಂಗ ತನಿಖೆ ಆರಂಭ
 

ಮುಡಾ ಅಕ್ರಮ : ನ್ಯಾಯಾಂಗ ತನಿಖೆ ಆರಂಭ

by Kundapur Xpress
Spread the love

ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನಗಳ ಹಂಚಿಕೆಯಲ್ಲಿನ ಅಕ್ರಮ ಕುರಿತ ತನಿಖೆಗಾಗಿ ರಾಜ್ಯ ಸರ್ಕಾರ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ಪಿ.ಎಸ್.ದೇಸಾಯಿ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗ ಮಂಗಳವಾರ ಮುಡಾ ಕಚೇರಿಗೆ ಭೇಟಿ ನೀಡಿತು. ದಾಖಲೆಗಳ ಪರಿಶೀಲನೆ ನಡೆಸಿ ಅಧಿಕಾರಿಗಳ ವಿಚಾರಣೆ ನಡೆಸಿತು.

ಇದೇ ಮೊದಲ ಬಾರಿಗೆ ಮೈಸೂರು ನಗರದ ಜೆಎಲ್ ಬಿ ರಸ್ತೆಯಲ್ಲಿರುವ ಮುಡಾ ಕಚೇರಿಗೆ ಮಂಗಳವಾರ ತಮ್ಮ ಸಹಾಯಕರೊಂದಿಗೆ ಆಗಮಿಸಿದ ನ್ಯಾ.ಪಿ.ಎನ್. ದೇಸಾಯಿ ಅವರು ಮುಡಾದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಂತರ 50:50 ಅನುಪಾತದಲ್ಲಿ ಹಂಚಿಕೆಯಾದ ಎಲ್ಲಾ ನಿವೇಶನಗಳು ಹಾಗೂ ಫಲಾನುಭವಿಗಳ ಪಟ್ಟಿ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳ ಕುರಿತು ಸಂಜೆಯವರೆಗೂ ವಿಚಾರಣೆ ನಡೆಸಿದರು ನಿವೇಶನಗಳ ಹಂಚಿಕೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ವಿವರಣೆ ಪಡೆದರು

   

Related Articles

error: Content is protected !!