Home » ರಾಜ್ಯದಲ್ಲಿ ಡಿಸೇಲ್‌ ಬೆಲೆ 2.00 ರೂ. ಹೆಚ್ಚಳ
 

ರಾಜ್ಯದಲ್ಲಿ ಡಿಸೇಲ್‌ ಬೆಲೆ 2.00 ರೂ. ಹೆಚ್ಚಳ

by Kundapur Xpress
Spread the love

ಬೆಂಗಳೂರು : ಒಂದೆಡೆ ಬಿಸಿಲಿನ ಧಗೆ, ಇನ್ನೊಂದೆಡೆ ರಾಜ್ಯ ಸರ್ಕಾರದ ಬೆಲೆ ಏರಿಕೆಯ ಧಗೆ ಇದರಿಂದ ತತ್ತರಿಸಿದ್ದ ರಾಜ್ಯದ ಜನತೆಗೆ ಮತ್ತೊಂದು ಆಘಾತ ಎದುರಾಗಿದೆ. ಭಾಗ್ಯಗಳ ಸರ್ಕಾರ ಡೀಸೆಲ್‌ ದರವನ್ನು ಏಕಾಏಕಿ 2 ರೂ. ಹೆಚ್ಚಳ ಮಾಡಿದೆ. ಏ.1 ರಿಂದ ಅನ್ವಯವಾಗುವಂತೆ ರಾಜ್ಯ ಸರ್ಕಾರ ಡೀಸೆಲ್ ಮೇಲಿನ ಸೆಸ್ ಏರಿಕೆ ಮಾಡಿದ್ದು ಇದರಿಂದ ಪ್ರತೀ ಲೀಟರ್ ಡೀಸೆಲ್ ಬೆಲೆ 2.00 ರೂ. ಏರಿಕೆಯಾಗಲಿದೆ.

ಡೀಸೆಲ್ ಪ್ರಮುಖವಾಗಿ ಸರಕು ಸಾಗಾಣಿಕೆಗೆ ಉಪಯೋಗಿಸುವ ಇಂಧನವಾಗಿದ್ದು, ಇದರ ಬೆಲೆ ಹೆಚ್ಚಳದಿಂದ ಅಗತ್ಯ ವಸ್ತುಗಳ ಪೂರೈಕೆ ಮೇಲೆ ನೇರ ಪರಿಣಾಮ ಬೀರಲಿದೆ. 

 

Related Articles

error: Content is protected !!