144
ಬೆಂಗಳೂರು : ಬೆಂಗಳೂರು ಮೂಲದ ಮೈನಸ್ ಝೀರೋ ಸ್ಟಾರ್ಟಪ್ ಕಂಪನಿ ದೇಶದ ಮೊದಲ ಕೃತಕ ಬುದ್ಧಿ ಮತ್ತೆ ಆಧರಿತ ಸ್ವಯಂಚಾಲಿತ ಕಾರು ಅಭಿವೃದ್ಧಿಪಡಿಸಿದೆ. ದೇಶದ ಸಂಚಾರಿ ವ್ಯವಸ್ಥೆಗೆ ಅನುಗುಣವಾಗಿ ಈ ಕಾರು ಓಡುವುದು ವಿಶೇಷ.
ಇಷ್ಟು ದಿನ ಕೇವಲ ಎಲಾನ್ ಮಸ್ಕರ ಟೆಸ್ಲಾ ಡ್ರೈವರ್‌ಲೆಸ್ ಕಾರಿನ ವಿಡಿಯೋ ನೋಡುವುದೇ ಆಗಿತ್ತು. ಆದರೆ, ಈಗ ನಮ್ಮ ರಾಜ್ಯದಲ್ಲಿ ಇಂಥದ್ದೊಂದು ಆಟೋಪೈಲೆಟ್ ಕಾರು ಸಿದ್ಧವಾಗಿದ್ದು, ಬೆಂಗಳೂರಿನ ರಸ್ತೆಯಲ್ಲಿ ಪ್ರಾಯೋಗಿಕ ಸಂಚಾರ ನಡೆಸಿರುವುದಾಗಿ ಕಂಪನಿ ತನ್ನ ಎಕ್ಸ್’ ಖಾತೆಯಲ್ಲಿ ತಿಳಿಸಿದೆ. ಇದು ಭಾರತದಲ್ಲೇ ಪ್ರಥಮ ಬಾರಿ ಎಂದು ಕಂಪೆನಿ ಹೇಳಿಕೊಂಡಿದೆ

