Home » ಜೋಗ ಜಲಪಾತಕ್ಕೆ ಕಳೆ ತಂದ ಮಳೆ
 

ಜೋಗ ಜಲಪಾತಕ್ಕೆ ಕಳೆ ತಂದ ಮಳೆ

by Kundapur Xpress
Spread the love

ಶಿವಮೊಗ್ಗ : ಜಿಲ್ಲೆಯ ಪಶ್ಚಿಮಘಟ್ಟ ಪ್ರದೇಶದಲ್ಲಿ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಮುಂಗಾರಿನ ಮೊದಲ ದಿನವೇ ಶರಾವತಿ ನದಿ ತುಂಬಿ ಹರಿಯುತ್ತಿದ್ದು, ಜೋಗ ಜಲಪಾತ ಮೈದಳೆಯಲಾರಂಭಿಸಿದೆ.

ರಾಜ, ರಾಣಿ, ರೋರರ್ ಮತ್ತು ರಾಕೆಟ್ ಸೀಳುಗಳಲ್ಲಿ ನೀರು ಧರೆಗಿಳಿಯುತ್ತಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯಲು ಆರಂಭಿಸಿದೆ. ಗಳಿಗೆಗೊಮ್ಮೆ ಸೌಂದರ್ಯವನ್ನು ಮುಚ್ಚಿ ಮತ್ತೆ ಬಿಚ್ಚಿಡುವ ಮಂಜಿನ ಆಟವೂ ಜಲಪಾತದ ಸೌಂದರ್ಯಕ್ಕೆ ಇನ್ನಷ್ಟು ಕಳೆ ತಂದಿದೆ.

ಹೊಸನಗರ ತಾಲೂಕಿನ ಚಕ್ರಾ ನಗರದಲ್ಲಿ ಕಳೆದ 24 ಗಂಟೆಗಳಲ್ಲಿ 20 ಸೆಂ.ಮೀ. ಮಳೆ ದಾಖಲಾಗಿದೆ

 

Related Articles

error: Content is protected !!