Home » ಸಿದ್ದರಾಮಯ್ಯರಿಂದ ಸಿಎಂ ಸ್ಥಾನ ಕಸಿದುಕೊಳ್ಳುವುದು ಕಷ್ಟ : ಶ್ರೀಗಳು
 

ಸಿದ್ದರಾಮಯ್ಯರಿಂದ ಸಿಎಂ ಸ್ಥಾನ ಕಸಿದುಕೊಳ್ಳುವುದು ಕಷ್ಟ : ಶ್ರೀಗಳು

: ಕೋಡಿ ಶ್ರೀಗಳು

by Kundapur Xpress
Spread the love

ಯಾದಗಿರಿ : ಹಾಲುಮತ ಸಮಾಜವು ಪ್ರಾಚೀನ ಕಾಲದಿಂದ ದೈವಾರಾಧನೆ ಮಾಡುವ ಸಮಾಜ. ಹಾಲು ಕೆಟ್ಟರು ಹಾಲು ಸಮಾಜ ಕೆಡದು. ಹಾಲುಮತ ಸಮಾಜದ ಕೈಯಲ್ಲಿ ರಾಜ್ಯದ ಅಧಿಕಾರವಿದ್ದು, ಸಿಎಂ ಕುರ್ಚಿಯಿಂದ ಬಿಡಿಸುವುದು ಅಷ್ಟು ಸುಲಭವಲ್ಲ ಎಂದು ಕೋಡಿಮಠದ ಡಾ.ಶಿವಯೋಗಿ ಶಿವಾನಂದ ಸ್ವಾಮೀಜಿ ಸಿಎಂ ಸಿದ್ದರಾಮಯ್ಯ ಕುರಿತು ಭವಿಷ್ಯ ನುಡಿದರು.

ಯಾದಗಿರಿಯಲ್ಲಿ ಈ ಕುರಿತು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ತಾವಾಗೇ ಸಿಎಂ ಸ್ಥಾನ ಬಿಡಬೇಕೇ ಹೊರತು. ನೀವು ಬಿಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಮುಂದೆ ಏನಾಗುತ್ತದೆ ಎನ್ನುವುದನ್ನು ಯುಗಾದಿ ನಂತರ ಹೇಳುತ್ತೇನೆ ಎಂದರು.

ನಾಡಿನಲ್ಲಿ ಕೊರತೆ ಕಾಣುತ್ತಿಲ್ಲ ಯುಗಾದಿ ನಂತರ ಕರ್ನಾಟಕದ ಕುರಿತು ಗೊತ್ತಾಗಲಿದೆ. ಜಾಗತೀಕವಾಗಿ ಅತ್ಯಂತ ಅಜಾಗ ರೂಕತೆಯಿದ್ದು ತೊಂದರೆಯಿದೆ. ಕಳೆದ ವರ್ಷಕ್ಕಿಂತಲೂ ಭೀಕರತೆ ಕಾಣುವ ಲಕ್ಷಣ ಇದೆ. ಯುಗಾದಿ ಇನ್ನೂ ಒಂದು ತಿಂಗಳು ತಡ ಇದ್ದು ಹೇಳುವುದು ಕಷ್ಟ ನಮ್ಮ ದೃಷ್ಟಿಯಲ್ಲಿ ಬರುವ ಸಂವತ್ಸರದಲ್ಲಿ ರಾಜ್ಯಕ್ಕೆ ತೊಂದರೆ ತಾಪತ್ರೆವಿಲ್ಲ, ಮಳೆ ಬೆಳೆ ಚೆನ್ನಾಗಿ ಆಗುತ್ತದೆ ಸುಭಿಕ್ಷತೆ ಇರುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ಭೂಕಂಪ ಹೆಚ್ಚಾಗುತ್ತಿವೆ. ಈ ಕುರಿತು ಕಳೆದ ವರ್ಷ ನಾನು ಭವಿಷ್ಯ ನುಡಿದಿದ್ದೆ. ಭೂಕಂಪ, ಜನರ ಸಾವು ನೋವಾಗುವುದು, ಕಟ್ಟಡ ಕುಸಿದು ಬಿಳುವುದು ಮುಂದುವರಿಯಲಿದೆ. ಭೂ ಸುನಾಮಿ, ಜಲ ಸುನಾಮಿ ವಾಯು ಸುನಾಮಿ ಕಾಣಿಸಿಕೊಳ್ಳಲಿವೆ. ಈವರೆಗೂ ಜಲ ಸುನಾಮಿ ಆಗುತಿತ್ತು. ಈ ಬಾರಿ ಭೂ-ಸುನಾಮಿಯಾಗಲಿದೆ. ಜಲ ಸುನಾಮಿ ಹಾಗೂ ವಾಯು ಸುನಾಮಿ ಹೆಚ್ಚಾಗಲಿದೆ. ಬಾಹ್ಯ ಸುನಾಮಿ ಎಂದರೆ ಬಾಹ್ಯಾಕಾಶದಲ್ಲಿ ಕಂಡು ಬರುವ ತೊಂದರೆ ಎಂದು ತಿಳಿಸಿದರು.

 

Related Articles

error: Content is protected !!