Home » ಕೊಲ್ಲೂರು ಶ್ರೀ ಮೂಕಾಂಬಿಕಾಗೆ ಚಿನ್ನದ ಮುಖವಾಡ ಸಮರ್ಪಣೆ
 

ಕೊಲ್ಲೂರು ಶ್ರೀ ಮೂಕಾಂಬಿಕಾಗೆ ಚಿನ್ನದ ಮುಖವಾಡ ಸಮರ್ಪಣೆ

by Kundapur Xpress
Spread the love

ಕುಂದಾಪುರ :: ಕೊಲ್ಲೂರು ಮೂಕಾಂಬಿಕಾ ದೇವಿಗೆ ಭಕ್ತರೋರ್ವರು ಕಾಣಿಕೆ ರೂಪದಲ್ಲಿ ನೀಡಿದ 1 ಕೆ.ಜಿ. ತೂಕದ ನವರತ್ನ ಕಲ್ಲುಗಳುಳ್ಳ ಚಿನ್ನದ ಮುಖವಾಡವನ್ನು ಬುಧವಾರ ಶ್ರೀದೇವಿಗೆ ಸಮರ್ಪಿಸಲಾಯಿತು.

ತುಮಕೂರು ಜಿಲ್ಲೆಯ ಶಿರಾದ ಡಾ.ಕೆ. ಲಕ್ಷ್ಮೀನಾರಾಯಣ ಕುಟುಂಬ ಇದನ್ನು ಕೊಡುಗೆಯಾಗಿ ನೀಡಿದ್ದಾರೆ. ಬೆಳಗ್ಗೆ ರಥಬೀದಿಯಿಂದ ವಾದ್ಯಘೋಷ ಗಳೊಡನೆ ಚಿನ್ನದ ಮುಖವಾಡವನ್ನು ದೇಗುಲಕ್ಕೆ ತರಲಾಯಿತು. ಅರ್ಚಕ ಕೆ.ಎನ್. ಸುಬ್ರಹ್ಮಣ್ಯ ಅಡಿಗ, ನರಸಿಂಹ ಭಟ್, ಕಾಳಿದಾಸ್ ಭಟ್ ನೇತೃತ್ವದಲ್ಲಿ ವಿಶೇಷ ಪೂಜೆಯೊಂದಿಗೆ ಶ್ರೀದೇವಿಗೆ ಸಮರ್ಪಿಸಲಾಯಿತು

ಈ ಸಂದರ್ಭದಲ್ಲಿ ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ಕುಮಾ‌ರ್ ಶೆಟ್ಟಿ ಸಮಿತಿ ಸದಸ್ಯರಾದ ರಘುರಾಮ ದೇವಾಡಿಗ ಆಲೂರು, ಮಹಾಲಿಂಗ ನಾಯ್ಕ ಸುಧಾ ಮತ್ತಿತರರು ಇದ್ದರು. ಜೂ. 10ರಂದು ಶೃಂಗೇರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಯವರ ನೇತೃತ್ವದಲ್ಲಿ ಈ ಮುಖವಾಡಕ್ಕೆ ಶೃಂಗೇರಿ ದೇಗುಲದಲ್ಲಿ ಪೂಜೆ ಸಲ್ಲಿಸಲಾಗಿತ್ತು. 

 

Related Articles

error: Content is protected !!