ಹುಬ್ಬಳ್ಳಿ : ಹಿಂದೂಗಳ ರಕ್ಷಣೆ ಹಾಗೂ ಮಠ ಮಾನ್ಯಗಳ ಹಿತಕ್ಕಾಗಿ ರಾಜ್ಯದಲ್ಲಿ ‘ಕ್ರಾಂತಿವೀರ ಬ್ರಿಗೇಡ್’ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲಾಗಿದೆ ವಿವಿಧ ಮಠಾಧೀಶರೇ ಸೇರಿಕೊಂಡು ಹುಟ್ಟುಹಾಕಿರುವ ಸಂಘಟನೆಯಿದು.ಫೆ.4ರಂದು ಬಸವನ ಬಾಗೇವಾಡಿಯಲ್ಲಿ 1008 ಮಠಾಧೀಶರ ಪಾದಪೂಜೆ ಮೂಲಕ ಬ್ರಿಗೇಡ್ಗೆ ಚಾಲನೆ ನೀಡಲಾಗುತ್ತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹಾಗೂ ಬ್ರಿಗೇಡ್ ಅಧ್ಯಕ್ಷರೂ ಆಗಿರುವ ವಿಜಯಪುರ ಜಿಲ್ಲೆಯ ಮಖಣಪುರದ ಶ್ರೀಸೋಮೇಶ್ವರ ಸ್ವಾಮೀಜಿ ತಿಳಿಸಿದರು.
ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ನಾಡಿನ ವಿವಿಧ ಸಮಾಜದ 100 ಮಠಾಧೀಶರು ಇದರ ಸದಸ್ಯರಾಗಿದ್ದಾರೆ. ಈ ಪೈಕಿ 25 ಸ್ವಾಮೀಜಿಗಳ ನೇತೃತ್ವದಲ್ಲಿ ಬ್ರಿಗೇಡ್ ರೂಪಿಸಲಾಗಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಹಿಂದುತ್ವದ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಕ್ರಾಂತಿವೀರ ಬ್ರಿಗೇಡ್ ಹೋರಾಟ ನಡೆಸಲಿದೆ ಎಂದರು.