ಧರ್ಮಸ್ಥಳ : ಅನಾಮಧೇಯ ಮುಸುಕುಧಾರಿ ಮಂಡ್ಯ ಜಿಲ್ಲೆ ಚಿಕ್ಕಬಳ್ಳಿ ನಿವಾಸಿ ನಂಜಯ್ಯ ಪುತ್ರ ಚಿನ್ನಯ್ಯ (44 ವರ್ಷ) ಎಂದು ಅಧಿಕೃತವಾಗಿ ಖಚಿತವಾಗಿದೆ. ಅಲ್ಲದೆ ತಾನು ನೂರಾರು ಶವ ಹೂತಿರುವುದಾಗಿ ನೀಡಿದ್ದ ಹೇಳಿಕೆಯನ್ನು ಸಾಬೀತು ಪಡಿಸಲು ವಿಫಲವಾಗಿದ್ದಾನೆ ಮಾತ್ರವಲ್ಲ ತಾನು ಪೊಲೀಸ್ ಠಾಣೆಗೆ ತಂದಿದ್ದ ತಲೆಬುರುಡೆ ಅತ್ಯಾಚಾರಕ್ಕೆ ಒಳಗಾದ ಮಹಿಳೆಯದ್ದು ಎಂದು ಸಾಬೀತುಪಡಿಸಲು ಕೂಡ ವಿಫಲನಾಗಿದ್ದಾನೆ. ಇದು ಆತನ ಬಂಧನಕ್ಕೆ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ,
ಚಿನ್ನಯ್ಯ ಹೇಳಿದ್ದಂತೆ ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ 17 ಸ್ಥಳಗಳಲ್ಲಿ ಶವಗಳಿಗಾಗಿ ಎಸ್‌ಐಟಿ ಶೋಧ ನಡೆ ಸತ್ತು. ಆದರೆ ‘ಸ್ಥಳ ಸಂಖ್ಯೆ -6ರಲ್ಲಿ’ (ಸ್ಪಾಟ್ ನಂ.6) ಮಾತ್ರ ಮೂಳೆ ಸಿಕ್ಕಿದ್ದು, ಸ್ಥಳ 13ರಲ್ಲಿ ಶೋಧ ನಡೆಸುತ್ತಿದ್ದಾಗ ಸಮೀಪದಲ್ಲಿಯೇ ಭೂಮಿ ಮೇಲೆ ಕೊಳೆತ ಶವ ಪತ್ತೆ ಆಗಿತ್ತು. ಉಳಿದೆಡೆ ಶವ ಸಿಕ್ಕಿರಲಿಲ್ಲ.
ಮೇಲಾಗಿ ತಾನು ತಂದಿದ್ದು ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಗಳ ತಲೆಬುರುಡೆ ಎಂದು ಹೇಳಿದ್ದ. ಇದು ಮಹಿಳೆಯದ್ದಲ್ಲ, ಪುರುಷನದ್ದು ಎಂದು ಎಂದು 7 ವಿಧಿವಿಜ್ಞಾನ ಪ್ರಯೋಗದಲ್ಲಿ ದೃಢಪಟ್ಟಿದೆ. ಮೇಲಾಗಿ ಆತ ತಂದಿದ್ದ ತಲೆಬುರುಡೆಗೆ ಅಂಟಿದ್ದ ಮಣ್ಣು ಧರ್ಮಸ್ಥಳ ಪರಿಸರದ್ದಲ್ಲ. ಬೇರೆ ಪ್ರದೇಶದ್ದು ಎಂದು ಕೂಡ ಫೊರೆನ್ಸಿಕ್ ಪರೀಕ್ಷೆಯಿಂದ ದೃಢಪಟ್ಟಿದೆ.

