Home » ಮುಡಾ ಕೇಸ್‌ನಲ್ಲಿ ಸಿಎಂಗೆ ಕ್ಲೀನ್ ಚಿಟ್‌ ಸಾಧ್ಯವೇ ಇಲ್ಲ : ಸ್ನೇಹಮಯಿ
 

ಮುಡಾ ಕೇಸ್‌ನಲ್ಲಿ ಸಿಎಂಗೆ ಕ್ಲೀನ್ ಚಿಟ್‌ ಸಾಧ್ಯವೇ ಇಲ್ಲ : ಸ್ನೇಹಮಯಿ

by Kundapur Xpress
Spread the love

ಮೈಸೂರು : ಮುಡಾ ಹಗರಣ ಸಂಬಂಧ ನನ್ನ ಬಳಿ ಇರುವ ದಾಖಲೆಗಳ ಪ್ರಕಾರ ಸಿಎಂಗೆ ಕ್ಲೀನ್ ಚಿಟ್ ನೀಡಲು ಸಾಧ್ಯವಿಲ್ಲ ಎಂದು ದೂರುದಾರ ಸ್ನೇಹಮಯಿ ಕೃಷ್ಣ ತಿಳಿಸಿದರು.

ಮುಡಾ ಹಗರಣದಲ್ಲಿ ಪಿ.ಎನ್.ದೇಸಾಯಿ ಆಯೋಗ ಸಿಎಂಗೆ ಕ್ಲೀನ್ ಚಿಟ್ ನೀಡಿರುವ ವಿಚಾರಕ್ಕೆ ನಗರದಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ದೇಸಾಯಿ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ ಅಷ್ಟೇ. ಕ್ಲೀನ್ ಚಿಟ್ ನೀಡಿರುವ ಬಗ್ಗೆ ಸರ್ಕಾರ ತಿಳಿಸಬೇಕಿದೆ ಎಂದರು.

ನಾನು ನೀಡಿರುವ ದಾಖಲೆಗಳನ್ನು ನ್ಯಾಯಾಧೀಶರು ಪರಿಗಣಿಸುವ ಸಾಧ್ಯತೆ ಇದೆ. ಕ್ಲೀನ್ ಚಿಟ್ ನೀಡಿದರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ವರದಿ ಸಲ್ಲಿಕೆಯಾಗಿದೆ. ಆದಷ್ಟು ಬೇಗ ಸರ್ಕಾರ ಸಾರ್ವಜನಿಕರಿಗೆ ವರದಿಯನ್ನು ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದರು.

 

Related Articles

error: Content is protected !!