122
ಬೆಂಗಳೂರು: ತುಮಕೂರು ರೈಲು ನಿಲ್ದಾಣಕ್ಕೆ ಡಾ.ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಕರ್ನಾಟಕ ಸರ್ಕಾರ ಅನುಮೋದಿಸಿದೆ. ಈ ಸಂಬಂಧ ರಾಜ್ಯ ಸರ್ಕಾರದ ಮೂಲಸೌಕರ್ಯ ಅಭಿವೃದ್ಧಿ ಕಾರ್ಯದರ್ಶಿ, ಕೇಂದ್ರ ಸರ್ಕಾರದ ಗೃಹ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದು ತಿಳಿಸಿದ್ದಾರೆ. ಕರ್ನಾಟಕ ರಾಜ್ಯವು ಜಾಗತಿಕ ಸನ್ನಿವೇಶದಲ್ಲಿ ದೈವಿಕ ಶಕ್ತಿ ಎಂದು ಗುರುತಿಸಲ್ಪಟ್ಟ ಮಹಾನ್ ಸಂತರು ಮತ್ತು ಧಾರ್ಮಿಕ ಗುರುಗಳ ಅತ್ಯಂತ ಶ್ರೀಮಂತ ಸಂಪ್ರದಾಯವನ್ನು ಹೊಂದಿದೆ.
ಸಿದ್ದಗಂಗಾಮಠದ ಪದ್ಮಭೂಷಣ ಡಾ. ಶಿವಕುಮಾರ ಮಹಾಸ್ವಾಮೀಜಿಯವರು 1930 ರಲ್ಲಿ ಮಠದ ಮುಖ್ಯಸ್ಥರಾದರು. ಸುಮಾರು 87 ವರ್ಷಗಳ ಕಾಲ ಅವರು ಮನುಕುಲಕ್ಕೆ ಉತ್ತಮ ಸೇವೆ ಸಲ್ಲಿಸಿದರು ಮತ್ತು ನಡೆದಾಡುವ ದೇವರು ಎಂದು ಜನಪ್ರಿಯವಾಗಿ ಗುರುತಿಸಲ್ಪಟ್ಟಿದ್ದಾರೆ.

