Home » ದಕ್ಷಿಣ ರಾಜ್ಯಗಳೇ ಉಗ್ರರ ಗುರಿ : ಪವನ್ ಕಲ್ಯಾಣ್
 

ದಕ್ಷಿಣ ರಾಜ್ಯಗಳೇ ಉಗ್ರರ ಗುರಿ : ಪವನ್ ಕಲ್ಯಾಣ್

by Kundapur Xpress
Spread the love

ವಿಜಯವಾಡ : ‘ದಕ್ಷಿಣ ಭಾರತದ ರಾಜ್ಯಗಳು ಉಗ್ರ ಕೃತ್ಯಕ್ಕೆ ಗುರಿಗಳಾಗುತ್ತಿವೆ. ಇದು ಗಂಭೀರವಾದ ವಿಷಯ ಎಂದು ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಕಳವಳ ವ್ಯಕ್ತಪಡಿಸಿದ್ದಾರೆ. ಕೊಯಮತ್ತೂರು ಮತ್ತು ಹೈದರಾಬಾದ್ ನ ಉಗ್ರ ದಾಳಿಗಳನ್ನು ಉಲ್ಲೇ ಖಿಸಿ ಮಾತನಾಡಿದ ಪವನ್, ‘ದೇಶದ ಗಡಿಯಲ್ಲಿ ಸೇನಾ ಪಡೆಗಳು ಎಷ್ಟು ಎಚ್ಚರವಾಗಿದೆಯೋ ಅದೇ ರೀತಿ ಆಂತರಿಕಾ ಭದ್ರತಾ ಪಡೆಗಳು ಎಚ್ಚರದಿಂದಿರಬೇಕು. ಭದ್ರತೆಯನ್ನು ಖಾತ್ರಿ ಪಡಿಸಬೇಕು ಎಂದರು.

ಜೊತೆಗೆ ಕರಾವಳಿಯ ಒಳನುಸುಳುವಿಕೆಯ ಭೀತಿಯನ್ನು ತಡೆಗಟ್ಟಲು ಎಲ್ಲಾ ಇಲಾಖೆಗಳು ಸಮನ್ವ ಯವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಇದೇ ವೇಳೆ ರೋಹಿಂಗ್ಯಾಗಳ ಬಗ್ಗೆ ಮಾತನಾಡಿ, ‘ಇವರು ಸ್ಥಳೀಯ ಉದ್ಯೋಗಾವಕಾಶದ ಮೇಲೆ ಪರಿಣಾಮ ಬೀರುತ್ತಿದ್ದಾರೆ. ಇವರಿಗೆ ವ್ಯವಸ್ಥೆಯ ಲೋಪ ಮತ್ತು ಭದ್ರತಾ ವೈಫಲ್ಯದಿಂದ ಆಧಾ‌ರ್ ಲಭಿಸುತ್ತಿದೆ’ ಎಂದರು.

 

Related Articles

error: Content is protected !!