ಬೆಂಗಳೂರು : ಲೈಂಗಿಕ ದೌರ್ಜನ್ಯ ಆರೋಪ ಹೊತ್ತು ತಿಂಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಹಣಕಾಸು ನೆರವು ನೀಡಿದ್ದ ತಪ್ಪಿಗೆ ಅವರ ಗೆಳತಿಯೊಬ್ಬರಿಗೆ ವಿಶೇಷ ತನಿಖಾ ದಳ (ಎಸ್ ಐಟಿ)ದ ತನಿಖೆಯ ಸಂಕಷ್ಟ ಎದುರಾಗಿದೆ. ಪ್ರಜ್ವಲ್ ಅವರ ಗೂಗಲ್ ಪೇ ಮಾಹಿತಿಯನ್ನು ಪರಿಶೀಲಿಸಿದಾಗ ವಿದೇಶದಲ್ಲಿದ್ದ ಅವಧಿಯಲ್ಲಿ ಅವರಿಗೆ ಹಣಕಾಸು ಸಹಕಾರ ಕೊಟ್ಟವರ ವಿವರ ಬಯಲಾಗಿದೆ. ತಮ್ಮ ಸ್ನೇಹಿತರ ಮೂಲಕ ಪ್ರಜ್ವಲ್ ಅವರಿಗೆ ನಿಯಮಿತವಾಗಿ ಗೆಳತಿ ಹಣಕಾಸಿನ ನೆರವು ನೀಡಿದ್ದರು. ಈ ಮಾಹಿತಿ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಆಕೆಗೆ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ಹೇಳಿವೆ