ಉಡುಪಿ, : ಬಾಂಗ್ಲಾದೇಶದಲ್ಲಿ ಇಸ್ಕಾನ್ ಧಾರ್ಮಿಕ ನಾಯಕರ ಬಂಧನದ ವಿಷಯ ತಿಳಿದು ಬಹಳ ಕಳವಳಗೊಂಡಿದ್ದೇವೆ. ಇದು ಅತ್ಯಂತ ಖಂಡನೀಯ ಎಂದು ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದ್ದಾರೆ.
ವೀಡಿಯೊ ಮೂಲಕ ಸಂದೇಶ ನೀಡಿದ ಶ್ರೀಪಾದರು, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾಕರ ಮೇಲಿನ ದಾಳಿ ಯಾವುದೇ ರೀತಿಯಲ್ಲೂ ಸಮರ್ಥನೀಯವಲ್ಲ ಬಾಂಗ್ಲದೇಶ ಜಾತ್ಯತೀಯ ರಾಷ್ಟ್ರವಾಗಿ ಎಲ್ಲ ಧರ್ಮಗಳಿಗೂ ಅವಕಾಶ ನೀಡುವ ರಾಷ್ಟ್ರವಾಗಿ ಹಿಂದೂ ಧರ್ಮದ ಬಗ್ಗೆಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಇಸ್ಕಾನ್ ಧಾರ್ಮಿಕ ನಾಯಕರನ್ನು ತತ್ ಕ್ಷಣವೇ ಬಿಡುಗಡೆ ಮಾಡಬೇಕು ಮತ್ತು ಅಲ್ಲಿನ ಹಿಂದೂಗಳಿಗೆ ಸರಕಾರ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಭಾರತ ಸರಕಾರ ಈಗಾಗಲೇ ಕೆಲವು ಕ್ರಮಗಳನ್ನು ತೆಗೆದುಕೊಂಡಿದ್ದರೂ ಇನ್ನಷ್ಟು ಪರಿಣಾಮಕಾರಿ ಕ್ರಮ ಅಗತ್ಯ ಎಂದು ಶ್ರೀಪಾದರು ಆಗ್ರಹಿಸಿದ್ದಾರೆ.