Home » ಚುನಾವಣಾ ಅಕ್ರಮ : ರಾಹುಲ್‌ ಪ್ರತಿಭಟನೆ
 

ಚುನಾವಣಾ ಅಕ್ರಮ : ರಾಹುಲ್‌ ಪ್ರತಿಭಟನೆ

by Kundapur Xpress
Spread the love

ಬೆಂಗಳೂರು : ಮತಗಳ್ಳತನ ವಿರುದ್ಧ ಕಾಂಗ್ರೆಸ್ ಆರಂಭಿಸಿರುವ ನಮ್ಮ ಮತ, ನಮ್ಮ ಹಕ್ಕು ರ್ಯಾಲಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಲೋಕಸಭಾ ಚುನಾವಣೆಯಲ್ಲಿ ನಡೆದ ಚುನಾವಣಾ ಅಕ್ರಮ ಮತ್ತು ಮತಗಳ್ಳತನ ವಿರೋಧಿಸಿ ಫ್ರೀಡಂಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ನರೇಂದ್ರ ಮೋದಿ ಅವರು ಮತಗಳ್ಳತನ ಮಾಡಿ ಪ್ರಧಾನಮಂತ್ರಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಚುನಾವಣಾ ಆಯೋಗ ಮತ್ತು ಬಿಜೆಪಿ ಮತ ಕಳ್ಳತನ ಮಾಡಿದೆ ಎಂದು ನಾವು 100% ಸಾಬೀತುಪಡಿಸಿದ್ದೇವೆ ಎಂದರು. ಸಂವಿಧಾನ ಪುಸ್ತಕದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇದೆ. ಗಾಂಧೀಜಿ, ಅಂಬೇಡ್ಕರ್, ನೆಹರೂ, ಪಟೇಲ್‌ ಧ್ವನಿ ಇದೆ. ಬಸವಣ್ಣ ಪುಲೆಯವರ ಧ್ವನಿಯೂ ಇದೆ. ಈ ಪುಸ್ತಕದ ಅಡಿಪಾಯ ಒನ್ ಮ್ಯಾನ್, ಒನ್ ಹೋಪ್, ಒಬ್ಬನಿಗೆ ಒಂದೇ ಮತ. ಭಾರತೀಯರಿಗೆ ಈ ಪುಸ್ತಕ ಒಂದೇ ಮತದ ಹಕ್ಕು ಕೊಟ್ಟಿದೆ. ಆದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಮೋದಿಯವರು ಈ ಗ್ರಂಥದ ಮೇಲೆ ಆಕ್ರಮಣ ಮಾಡಿದ್ದಾರೆ. ಸಂವಿಧಾನ ಮುಗಿಸುವ ಷಡ್ಯಂತ್ರ ಮಾಡಿದ್ದಾರೆ ಎಂದು ಟೀಕಿಸಿದರು

 

Related Articles

error: Content is protected !!