221
ನವದೆಹಲಿ : ಮುಡಾ ಕೇಸಿನಲ್ಲಿ ಪ್ರಾಸಿಕೂಶನ್ ಒಳಗಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬದಲಾವಣೆಯ ಸುದ್ದಿ ಚರ್ಚೆಯಲ್ಲಿರುವ ಸಂಧರ್ಭದಲ್ಲೇ ಸಚಿವ ಸತೀಶ್ ಜಾರಕಿಹೊಳಿ ರಾಹುಲ್ ಗಾಂಧಿಯವರನ್ನು ದೆಹಲಿಯಲ್ಲಿ ರಹಸ್ಯವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ದೆಹಲಿಯಿಂದ ವಾಪಾಸ್ಸಾಗುವ ವೇಳೆ ಪತ್ರಕರ್ತರ ಪ್ರಶ್ನೆಗೆ ಇದರಲ್ಲಿ ರಾಜಕೀಯವೇನಿಲ್ಲ ಎಂದು ತಿಳಿಸಿದ್ದಾರೆ ಆದರೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರ ಬೆಂಬಲಿಗರು ಮಾತ್ರ ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಚಾರ ಕೈಗೊಂಡಿದ್ದಾರೆ ಈ ಹಿನ್ನಲೆಯಲ್ಲಿ ಎಂ ಬಿ ಪಾಟೀಲ್ ಸೇರಿದಂತೆ ಅನೇಕರು ಮುಖ್ಯಮಂತ್ರಿ ಕುರ್ಚಿಯ ರೇಸ್ ನಲ್ಲಿದ್ದಾರೆ

