ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಕೃತ್ಯದಿಂದ ಬಚಾವಾಗಲು ನಟ ದರ್ಶನ್ ನಡೆಸಿದ ಮತ್ತು ಅವರ ಹಿಂಬಾಲಕರು ಈಗಲೂ ಅಂಥದ್ದೇ ಯತ್ನ ನಡೆಸುತ್ತಿರುವ ಆತಂಕಕಾರಿ ವಿಷಯ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ ಒಂದೆಡೆ ಹತ್ಯೆ ಕೇಸಲ್ಲಿ ಸಾಕ್ಷ್ಯ ನುಡಿಯದಂತೆ ಶೆಡ್ನ ಕಾವಲು ಗಾರರಿಗೆ ಡಿ ಗ್ಯಾಂಗ್ನ ಆಪ್ತರು ಭಾರೀ ಹಣದ ಆಮಿಷ ಒಡ್ಡುತ್ತಿದ್ದರೆ, ಮತ್ತೊಂದೆಡೆ ಪ್ರಕರಣ ದಲ್ಲಿ ತಾವು ಬಚಾವ್ ಆಗಲು ದರ್ಶನ್ ಸಂಗ್ರಹಿಸಿದ್ದ 40 ಲಕ್ಷ ರು. ಹಣವನ್ನು ಪೊಲೀಸರು ಜಪ್ತಿ ಮಾಡಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರು ಗುರುವಾರ ನ್ಯಾಯಾಲಯಕ್ಕೆ ಸಲ್ಲಿಸಿದ ರಿಮ್ಯಾಂಡ್ ಅಪ್ಲಿಕೇಷನ್ನಲ್ಲಿ ‘ಹತ್ಯೆ ಘಟನೆ ಬಳಿಕ ಬೆಂಗಳೂರಿನ ಪಟ್ಟಣಗೆರೆ ಶೆಡ್ನ ಕಾವಲುಗಾರರಿಗೆ ಪೊಲೀಸರ ಮುಂದೆ ಸಾಕ್ಷ್ಯ ನುಡಿಯದಂತೆ ದರ್ಶನ್ ಗ್ಯಾಂಗ್ ಪರವಾಗಿ ಕೆಲವರು ಹಣದಾಸೆ ತೋರಿಸಿದ್ದಾರೆ’ ಎಂಬ ಮಾಹಿತಿ ನೀಡಿದ್ದಾರೆ